ಬೆಂಗಳೂರು: ಡಿಸೆಂಬರ್ 9ರ ನಂತರ ರಾಜ್ಯದ ರಾಜಕೀಯದಲ್ಲಿ ಧ್ರುವೀಕರಣದ ಜೊತೆ ಶುದ್ಧೀಕರಣವು ಆಗಲಿದೆ. ಬಿಜೆಪಿ ಅಪಾಯಕಾರಿ ಪಕ್ಷ, ಮತದಾರರು ಎರಡು ಬಾರಿ ಯೋಚಿಸಿ ಮತ ಚಲಾಯಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರ ಉಪ ಚುನಾವಣೆ ಬಹಿರಂಗ ಪ್ರಚಾರದ ಕೊನೆ ದಿನವಾದ ಇಂದು ಶಿವಾಜಿನಗರದ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ವುಲ್ಲಾ ಪರ ಸಂಪಂಗಿ ರಾಮನಗರದಲ್ಲಿ
ಭರ್ಜರಿ ಪ್ರಚಾರದ ಜೊತೆಗೆ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ರು.
ದೇಶದ ಪ್ರಧಾನಿ ವಿದೇಶದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ನರೇಂದ್ರ ಮೋದಿ ವಿದೇಶಿ ಪ್ರಧಾನಿಯಾಗಿದ್ದಾರೆ. ಕೇಂದ್ರ ಅವೈಜ್ಞಾನಿಕ ನೀತಿಯಿಂದಾಗಿ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಬಿಜೆಪಿ, ಕಾಂಗ್ರೆಸ್ನಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲ ಎಂದು ಹೆಚ್ಡಿಕೆ ಕಿಡಿಕಾರಿದರು.
ಅಭಿವೃದ್ಧಿಗಾಗಿ ವಿದ್ಯಾವಂತ ಯುವಕ ತನ್ವೀರ್ ಅಹ್ಮದ್ ವುಲ್ಲಾ ಅವರಿಗೆ ಶಿವಾಜಿನಗರದ ಮತದಾರರು ಒಂದು ಅವಕಾಶ ನೀಡಿ. ಅವರು ಮಾದರಿ ಕ್ಷೇತ್ರವನ್ನಾಗಿ ಮಾಡುವ ಯೋಜನೆ ಹೊಂದಿದ್ದಾರೆ ಎಂದು ಕುಮಾರಸ್ವಾಮಿ ಮತಯಾಚಿಸಿದರು.