ಬೆಂಗಳೂರು :ವಿಧಾನಪರಿಷತ್‌ನ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಕೀಲ ಎ ಪಿ ರಂಗನಾಥ್ ಅವರು ₹10.73 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ ಪಿ ರಂಗನಾಥ್ ಆಸ್ತಿ ಎಷ್ಟು ಗೊತ್ತೆ? - JDS candidate for Bangalore Teachers field
ಪತ್ನಿ ನಂದಿನಿ ಹೆಸರಲ್ಲಿ 28.17 ಲಕ್ಷ ರೂ. ಮೌಲ್ಯದ ಚರಾಸ್ತಿ, ಪುತ್ರಿ ಧೃತಿ ಹೆಸರಲ್ಲಿ1.33 ಲಕ್ಷ ರೂ.ಮೌಲ್ಯದ ಚರಾಸ್ತಿ, ಪುತ್ರ ದ್ರೋಣ್ ಹೆಸರಲ್ಲಿ1.19 ಲಕ್ಷ ರೂ. ಮೌಲ್ಯದ ಚರಾಸ್ತಿ ಇರುವ ಬಗ್ಗೆ ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ..
ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆಸ್ತಿ ಮೌಲ್ಯದ ಕುರಿತು ಅವರು ಮಾಹಿತಿ ನೀಡಿದ್ದಾರೆ. ರಂಗನಾಥ್ ತಮ್ಮ ಹೆಸರಲ್ಲಿ 35.55 ಲಕ್ಷ ರೂ. ಚರಾಸ್ತಿ, 10.07 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ನಂದಿನಿ ಹೆಸರಲ್ಲಿ 28.17 ಲಕ್ಷ ರೂ. ಮೌಲ್ಯದ ಚರಾಸ್ತಿ, ಪುತ್ರಿ ಧೃತಿ ಹೆಸರಲ್ಲಿ1.33 ಲಕ್ಷ ರೂ.ಮೌಲ್ಯದ ಚರಾಸ್ತಿ, ಪುತ್ರ ದ್ರೋಣ್ ಹೆಸರಲ್ಲಿ1.19 ಲಕ್ಷ ರೂ. ಮೌಲ್ಯದ ಚರಾಸ್ತಿ ಇರುವ ಬಗ್ಗೆ ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ.
ರಂಗನಾಥ್ ಅವರು 23.79 ಲಕ್ಷ ರೂ. ಸಾಲ ಹೊಂದಿದ್ದಾರೆ. 7.14 ಲಕ್ಷ ರೂ. ಮೌಲ್ಯದ 150 ಗ್ರಾಂ ಚಿನ್ನ ಮತ್ತು 2.14 ಲಕ್ಷ ರೂ. ಮೌಲ್ಯದ 3.5 ಕೆಜಿ ಬೆಳ್ಳಿ ಇದೆ. ಪತ್ನಿ ಬಳಿ 23.82 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನ, 1.83 ಲಕ್ಷ ರೂ. ಮೌಲ್ಯದ 3 ಕೆಜಿ ಬೆಳ್ಳಿ ಮತ್ತು ಮಕ್ಕಳ ಬಳಿ ತಲಾ 1.19 ಲಕ್ಷ ರೂ. ಮೌಲ್ಯದ 25 ಗ್ರಾಂ ಚಿನ್ನ ಇದೆ ಎಂದು ಆಸ್ತಿ ವಿವರದಲ್ಲಿ ನಮೂದಿಸಲಾಗಿದೆ.