ಕರ್ನಾಟಕ

karnataka

ETV Bharat / state

ನಿಂಬೆ ಹಣ್ಣಿನ ರಸ ಬಳಕೆ, ಕೊರೊನಾ ಜಾಗೃತಿ ಬಗ್ಗೆ ಹೃದ್ರೋಗ ತಜ್ಞ ಡಾ. ಮಂಜುನಾಥ್ ಹೇಳಿದ್ದಿಷ್ಟು! - ಹೃದ್ರೋಗ ತಜ್ಞರಾಗಿರುವ ಡಾ.ಸಿ.ಎನ್ ಮಂಜುನಾಥ್

ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ನಿಂಬೆ ಹಣ್ಣಿನ ರಸದ ಬಳಕೆ ಕುರಿತು ಚರ್ಚೆಗಳು ಆರಂಭವಾಗಿದ್ದು, ಈ ಕುರಿತು ಜಯದೇವ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಯಾವ ಸಮಯದಲ್ಲಿ ಲಸಿಕೆ ಪಡೆಯಬೇಕು. ಯಾರು ಆಸ್ಪತ್ರೆಗೆ ದಾಖಲಾಗಬೇಕು. ಕೊರೊನಾ ಬರದಂತೆ ಹೇಗೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

jayadeva-hospital-doctor-manjunath
ಹೃದ್ರೋಗ ತಜ್ಞ ಮಂಜುನಾಥ್

By

Published : Apr 30, 2021, 3:46 PM IST

ಬೆಂಗಳೂರು: ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಈ ನಡುವೆ ನಿಂಬೆಹಣ್ಣಿನ ರಸದ ಸುದ್ದಿ ಹೆಚ್ಚು ವೈರಲ್ ಆಗಿದ್ದು ಗೊತ್ತೆ‌ ಇದೆ. ಈ ಸಂಬಂಧ ಜಯದೇವ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಹೃದ್ರೋಗ ತಜ್ಞರಾಗಿರುವ ಡಾ.ಸಿ.ಎನ್ ಮಂಜುನಾಥ್ ಪ್ರತಿಕ್ರಿಯಿಸಿದ್ದು, ಜನರು ಇಂತಹ ಮೂಢನಂಬಿಕೆಗೆ ಒಳಗಾಗಬಾರದು ಅಂತ ಮನವಿ ಮಾಡಿದರು.‌

ಅಂದಹಾಗೇ, ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಏರ್ಪಡಿಸಿದ್ದ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೇಚ್ಚರಿಕೆ ಎಂಬ ವೆಬಿನಾರ್ ಸಂವಾದದಲ್ಲಿ
ಭಾಗಿಯಾಗಿ ಮಾತಾನಾಡಿದರು.

ಅಮೆರಿಕ, ಬ್ರೆಜಿಲ್ ದೇಶವನ್ನ ಹಿಂದಿಕ್ಕಿ ಸೋಂಕಿತರ ಸಂಖ್ಯೆಯಲ್ಲಿ ಭಾರತ ದೇಶ ಮುಂದಿದೆ. ವೈದ್ಯರೇ ರೋಗಿಗಳಾಗುತ್ತಿದ್ದು, ಸೆಕ್ಯೂರಿಟಿಗಳೇ ನಮ್ಮ ಟೆಂಪರೇಚರ್ ಟೆಸ್ಟ್ ಮಾಡುವ ಪರಿಸ್ಥಿತಿಗೆ ಬದಲಾಗಿದೆ. ಕೋವಿಡ್ ಮೊದಲ ಅಲೆಗೂ ಹಾಗೂ 2ನೇ ಅಲೆಗೂ ಬಹಳಷ್ಟು ವ್ಯತ್ಯಾಸವಿದೆ. 2ನೇ ಅಲೆಯಲ್ಲಿ ಹರಡುವಿಕೆ ಪ್ರಮಾಣ 4ಪಟ್ಟು ಹೆಚ್ಚಾಗಿದೆ. ಇಷ್ಟು ಮಾತ್ರವಲ್ಲದೇ ಕಾಯಿಲೆ ತೀವ್ರತೆ ಕೂಡ ಜಾಸ್ತಿ ಇದೆ. ಹೀಗಾಗಿ ಮುನ್ನೆಚ್ಚರಿಕೆ ಅತ್ಯಗತ್ಯ ಎಂದಿದ್ದಾರೆ.

ಕೋವಿಡ್ 2ನೇ ಅಲೆಯ ಲಕ್ಷಣಗಳೇನು?

ಕೋವಿಡ್​ನ ಮೊದಲ ಅಲೆಯಲ್ಲಿ ಕೆಮ್ಮು, ಶೀತ, ಜ್ವರ, ಮೈಕೈ ನೋವು ಕಾಣಿಸಿಕೊಳ್ಳುತ್ತಿತ್ತು. ಹಾಗೇ ಕೊನೆ ಹಂತದಲ್ಲಿ ರುಚಿ, ವಾಸನೆ ಇಲ್ಲದೇ ಇರುವುದನ್ನ ಕಂಡಿದ್ದೇವೆ. ಆದರೆ ಈ 2ನೇ ಅಲೆಯಲ್ಲಿ ಹೊಟ್ಟೆ ನೋವು, ಭೇದಿ ಕೂಡ ಸೋಂಕಿನ ಲಕ್ಷಣವಾಗಿದ್ದು, ಭೇದಿ ಆದರೆ ಕೊರೊನಾ ಪರೀಕ್ಷೆ ಮಾಡಿಸಬೇಕು. ನಿರ್ಲಕ್ಷ್ಯ ಬೇಡವೇ ಬೇಡ ಅಂದರು.‌

ಕೋವಿಡ್ ಟೆಸ್ಟ್ ಮಾಡಿಸಲು ಭಯಬೇಡ

ಮೊದಮೊದಲು ಕೋವಿಡ್ ಟೆಸ್ಟ್ ಮಾಡಿಸಿ ಪಾಸಿಟಿವ್ ಬಂದರೆ ಸಾಮಾಜಿಕ ಬಹಿಷ್ಕಾರ ಮಾಡುವ ರೀತಿ ಪರಿಸ್ಥಿತಿ ಇರ್ತಿತು. ಆದರೆ ಇದೀಗ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಭಯಬೇಡ. ಸಾಮಾಜಿಕ ಅಂತರ ಅಗತ್ಯವಿಲ್ಲ, ಬದಲಿಗೆ ವ್ಯಕ್ತಿಗತ ಅಂತರ ಕಾಯ್ದು ಕೊಳ್ಳಬೇಕು. ಸಾಮಾಜಿಕವಾಗಿ ಒಗ್ಗಟ್ಟಾಗಿ ಇರಬೇಕು ಅಂತ ಮನವಿ ಮಾಡಿದರು.

ಪತ್ರಕರ್ತರು ಕಡ್ಡಾಯವಾಗಿ ಎನ್ - 95 ಮಾಸ್ಕ್ ಹಾಕಿ

ಪತ್ರಕರ್ತರು ಹೆಚ್ಚು ಗುಂಪಿನಲ್ಲಿ ಹಾಗೂ ಜನರ ಸಂಪರ್ಕದಲ್ಲಿ ಇದ್ದು ಕಡ್ಡಾಯವಾಗಿ N-95 ಮಾಸ್ಕ್ ಅನ್ನೇ ಹಾಕುವಂತೆ ತಿಳಿಸಿದರು. ಗಾಳಿ ಮೂಲಕವೇ ಕೋವಿಡ್ ವೈರಸ್ ಹರಡುವುದು. ಹೀಗಾಗಿ, ಬಟ್ಟೆ ಮಾಸ್ಕ್ ಅಷ್ಟು ಉತ್ತಮವಲ್ಲ. ಇನ್ನು ಸೋಂಕು ಇರುವವರು ಬಟ್ಟೆ ಮಾಸ್ಕ್ ಹಾಕಿದರೆ ಪ್ರಯೋಜನ ಇಲ್ಲ. ಬೇರೆಯವರು ಬಟ್ಟೆ ಮಾಸ್ಕ್ ಬಳಸಿದರೂ ಪ್ರತಿ ದಿನ ರಾತ್ರಿ ಸ್ವಚ್ಚಗೊಳಿಸಿ, ಐರನ್ ಮಾಡಿ ಹಾಕಿಕೊಳ್ಳಿ ಆಗ ಸೋಂಕು ಬಿಸಿಗೆ ಸಾಯಬಹುದು ಅಂದರು.

2ನೇ ಅಲೆಯಲ್ಲಿ ಯುವಕರೇ ಟಾರ್ಗೆಟ್

2ನೇ ಅಲೆಯಲ್ಲಿ ಯುವಕರೇ ಹೆಚ್ಚು ಟಾರ್ಗೆಟ್ ಆಗಿದ್ದಾರೆ.‌ ಮಕ್ಕಳಿಗೂ, ಯುವಕರಿಗೂ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮಾಸ್ಕ್ ಧರಿಸುವುದು, ಸ್ನಾನ ಮಾಡುವುದು ಒಳಿತು ಎಂದರು. ಕೆಮ್ಮು, ಸೀನು ಮೈಕೈ ನೋವು ಇದ್ದರೆ ತಪಾಸಣೆಗೆ ಒಳಪಡಿಸಿ, ಸಣ್ಣ - ಪುಟ್ಟ ಅನುಮಾನ ಇದ್ದರೂ ಪಲ್ಸ್ ಆಕ್ಸಿ ಮೀಟರ್ ಚೆಕ್ ಮಾಡಿಕೊಳ್ಳಬೇಕು. ಫೇಕ್ ಆಕ್ಸಿ ಮೀಟರ್ ಇರುವುದಿಂದ ಗುಣಮಟ್ಟದ ಆಕ್ಸಿ ಮೀಟರ್ ಬಳಸಿ ಎಂದರು.

ಹಾಗೇ, ಆಕ್ಸಿಜನ್ ಲೇವಲ್ 93 - 94 ಇದ್ದರೆ 5-6 ನಿಮಿಷ ನಡೆದು ನೋಡಿ ಆಕ್ಸಿಜನ್ 99 ಇದ್ದರೆ ಓಕೆ, 4% ಕಡಿಮೆ ಆದರೆ ಶ್ವಾಸಕೋಶಕ್ಕೆ ಸೋಂಕು ತಗುಲಿದೆ ಎಂಬ ಖಾತ್ರಿ ಮಾಡಿಕೊಳ್ಳಬಹುದು. ಸ್ಯಾಚುರೇಷನ್ ಕಡಿಮೆ ಇದ್ದರೆ, ಹೊಟ್ಟೆ ಮೇಲೆ ಮಲ್ಕೋಳಬೇಕು ಅಂದರೆ ಸಹಜವಾಗಿ ಬೆನ್ನಿನ ಮೇಲೆ ಮಲಗುವ ಬದಲು ಹೊಟ್ಟೆ ಮೇಲೆ ಮಲಗಿ ಪರೀಕ್ಷೆ ಮಾಡಬಹುದು ಎಂದರು. ಈಗಾಗಲೇ ಆಸ್ಪತ್ರೆಯಲ್ಲಿ ಹಾಸಿಗೆ ಸಮಸ್ಯೆ ಇದ್ದು ಬೆಡ್​​ಗಾಗಿ ಕಾಯುವ ವೇಳೆ ಈ ಸಿಂಪಲ್ ಟೆಸ್ಟ್ ಮಾಡಿಕೊಳ್ಳಬಹುದು.

ಜೂನ್ ಮೊದಲೆರಡು ವಾರದಲ್ಲಿ ಕೊರೊನಾ ಸೋಂಕು ಇಳಿಕೆ ಸಾಧ್ಯತೆ..!

ಜೂನ್ ತಿಂಗಳ ಮೊದಲೆರಡು ವಾರದಲ್ಲಿ ಸೋಂಕು ಇಳಿಕೆಯಾಗಲಿದೆ. ಆದರೆ, ಡಿಸೆಂಬರ್ ತನಕ ಅಂದರೆ ವರ್ಷಪೂರ್ತಿ ಮಾಸ್ಕ್ ಧರಿಸುವುದು ಕಡ್ಡಾಯ ಅಂದರು. ಹಾಗೇ ವ್ಯಾಕ್ಸಿನೇಷನ್‌ ಬಹು ಮುಖ್ಯವಾಗಿದ್ದು, ಕೋವಿಡ್ ಶೀಲ್ಡ್​​ನಿಂದ ತೊಂದರೆ, ಕೋ ವ್ಯಾಕ್ಸಿನ್ ಸೂಪರಿಯರ್ ಎಂಬ ಭಾವನೆ ಇದೆ. ಎರಡು ಒಂದೇ ಆಗಿದ್ದು ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.

ಲಸಿಕೆ ಹಾಕಿಸಿದಾಗ ಜ್ವರ ಬಂದರೆ ಅದು ಅಡ್ಡಪರಿಣಾಮ ವಲ್ಲ

ಜನರಲ್ಲಿ ಲಸಿಕೆ ಸಂಬಂಧ ಹಲವು ಊಹಾಪೋಹಗಳು ಇವೆ. ಲಸಿಕೆ ಹಾಕಿಸಿಕೊಂಡಿರೆ ಅಡ್ಡಪರಿಣಾಮ ಆಗುತ್ತೆ ಅಂತಾರೆ. ಆದರೆ ಯಾವುದು ಪರಿಣಾಮವಾಗಿ ಕೆಲಸ ಮಾಡುತ್ತೆ, ಅಡ್ಡಪರಿಣಾಮ ಯಾವುದು ಎಂಬುದು ಜನರು ತಿಳಿದಿಲ್ಲ. ಇಂಜೆಕ್ಷನ್ ಜಾಗದಲ್ಲಿ ನೋವು ಇದ್ದರೆ ಅದು ಅಡ್ಡಪರಿಣಾಮವಲ್ಲ. ಜ್ವರ ಬರುವುದೆಲ್ಲ ಒಳ್ಳೆ ಪರಿಣಾಮವಾಗಿದ್ದು, ಲಸಿಕೆ ಕೆಲಸ ಮಾಡ್ತಿದೆ ಅಂತ ಅಂದರು. ಅಡ್ಡಪರಿಣಾಮ ಅಂದರೆ ಲಸಿಕೆ ಕೊಟ್ಟ ತಕ್ಷಣ ಉಸಿರಾಟದ ಸಮಸ್ಯೆ, ಪ್ರಜ್ಞೆ ಹೋದರೆ, ಪ್ರಾಣ ಹೋದರೆ ಅದು ಅಡ್ಡಪರಿಣಾಮವಾಗುತ್ತೆ. ಇನ್ನು ಲಸಿಕೆಯನ್ನ
ಬಹು ಮುಖ್ಯವಾಗಿ ಬೈ ಪಾಸ್ ಸರ್ಜರಿ, ಹಾರ್ಟ್ ಸರ್ಜರಿ, ಹೃದಯ ಸಂಬಂಧಿ ಚಿಕಿತ್ಸೆ, ಕಿಡ್ನಿ ಫೈಲ್ಯುರ್ ಆದವರು ತೆಗೆದುಕೊಳ್ಳಬೇಕು ಎಂದಿದ್ದಾರೆ.

ಲಸಿಕೆ ನಂತರ ಕೊರೊನಾ ಬಂದರೆ ಹೀಗೆ ಮಾಡಿ

ಸೋಂಕಿತರು ಎರಡು ಮೂರು ವಾರಗಳ ಕಾಲ ಲಸಿಕೆ ತೆಗೆದುಕೊಳ್ಳಬಾರದು. ಲಸಿಕೆ ತೆಗೆದುಕೊಂಡ ಮೇಲೂ ಕೊರೊನಾ ಬರಬಹುದು. ಲಸಿಕೆ ಹಾಕಿಸಿಕೊಂಡಾಗ ಗುಂಪು ಸೇರುವುದು, ನಿರ್ಲಕ್ಷ್ಯ ವಹಿಸಬಾರದು. ಸಿಕೆ ಅನ್ನೋದು ಕಾರಿನಲ್ಲಿ ಇರುವ ಸೀಟ್ ಬೇಲ್ಟ್ ಇದ್ದಹಾಗೇ, ಆಕ್ಸಿಡೆಂಟ್ ಆದರೆ, ರಕ್ಷಣೆಗಾಗಿ ಅಷ್ಟೇ, ಹೀಗಾಗಿ ಲಸಿಕೆ ಹಾಕಿಸಿಕೊಳ್ಳಿ ಅಂತ ತಿಳಿಸಿದರು. ಮೊದಲ ಡೋಸ್ ನಂತರ ಸೋಂಕು ಬಂದರೆ ಎರಡು ಮೂರು ವಾರ ಕಳೆದ ನಂತರ ಲಸಿಕೆಯನ್ನ ಹಾಕಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.‌

ರೆಮ್ಡೆಸಿವಿರ್ ಇಂಜೆಕ್ಷನ್ ಯಾರಿಗೆ ಅಗತ್ಯ?

ಅಂದಹಾಗೇ, ರೆಮ್ಡೆಸಿವಿರ್ ಇಂಜೆಕ್ಷನ್ ಹಾಹಾಕಾರನೇ ಶುರುವಾಗಿದೆ. ಆದರೆ, ಇದನ್ನ ಎಲ್ಲ ಸೋಂಕಿತರು ತೆಗೆದುಕೊಳ್ಳುವ ಅಗತ್ಯವಿಲ್ಲ. ಈ ಇಂಜೆಕ್ಷನ್ ಅನ್ನ ಮೈಲ್ಡ್ ಕೇಸ್ ಇರುವವರು ತೆಗೆದುಕೊಳ್ಳಬಾರದು. ಮಾರ್ಡೆಂಟ್ ಸಿವೀಯರ್ ಇದ್ದರೆ ಕೊಡಬೇಕು, ಎಲ್ಲ ಸೋಂಕಿತರಿಗೂ ಅವಶ್ಯಕತೆ ಇಲ್ಲ. ಉಸಿರಾಟದ ತೊಂದರೆ ಇದ್ದವರಿಗಷ್ಟೇ ನೀಡಬೇಕು ಅಂದರು. ಇನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ನಿದ್ದೆಯು ಪ್ರಮುಖ ಪಾತ್ರ ವಹಿಸುತ್ತೆ ಹೀಗಾಗಿ ಚೆನ್ನಾಗಿ ನಿದ್ದೆ ಮಾಡುವುದು ಒಳಿತು ಎಂದು ಮಾಹಿತಿ ನೀಡಿದರು.

ABOUT THE AUTHOR

...view details