ಬೆಂಗಳೂರು:ಜಯದೇವ ಆಸ್ಪತ್ರೆ ವೈದ್ಯರನ್ನು ಕೊರೊನಾ ವೈರಸ್ ಕಂಗೆಡಿಸಿದ್ದು, ಈಗಾಗಲೇ ನಾಲ್ಕು ದಿನಗಳ ಕಾಲ ಒಪಿಡಿ ಬಂದ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ನಾಲ್ವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜೂನ್ 24-27 ರವರೆಗೆ ಹೊರ ರೋಗಿಗಳ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿತ್ತು. ಈಗ ಮುಂದುವರೆದ ಭಾಗವಾಗಿ, ಜುಲೈ 4 ರವರೆಗೆ ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಮತ್ತೆ ಪಾಸಿಟಿವ್ ಕೇಸ್ ದೃಢವಾಗುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆಗೆ ಬರುವಂತೆ ರೋಗಿಗಳಿಗೆ ಮನವಿ ಮಾಡಲಾಗಿದೆ.