ಕರ್ನಾಟಕ

karnataka

ETV Bharat / state

ರಾಜ್ಯ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ ಜಯ ಕರ್ನಾಟಕ ಸಂಘಟನೆ - Karnataka Bandh

ಮರಾಠ ಸಮುದಾಯದ ಏಳಿಗಾಗಿ ನಿಗಮ ರಚನೆ ಮಾಡಿರುವ ಮುಖ್ಯಮಂತ್ರಿಗಳ ಕ್ರಮವನ್ನು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಜಯ ಕರ್ನಾಟಕ ಸಂಘಟನೆ ಸಹ ತಿರುಗಿ ಬಿದ್ದಿದ್ದು, ಡಿಸೆಂಬರ್‌ 5ರಂದು ಕರೆ ನೀಡಿರುವ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದೆ.

Jaya Karnataka Organisation Support To Karnataka Bandh
ಬಂದ್​ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಜಯ ಕರ್ನಾಟಕ ಸಂಘಟನೆ

By

Published : Nov 21, 2020, 7:39 PM IST

ಬೆಂಗಳೂರು:ರಾಜ್ಯದಲ್ಲಿ ಮರಾಠ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಗಾಗಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಹಾಗೂ ಅದಕ್ಕೆ 50 ಕೋಟಿ ಮೀಸಲಿಡುವಂತೆ ಅದೇಶಿಸಿರುವ ಮುಖ್ಯಮಂತ್ರಿಗಳ ಕ್ರಮ ಖಂಡಿಸಿ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್​ಗೆ ಕರೆ ನೀಡಿವೆ.

ಈ ಬಗ್ಗೆ ಜಯ ಕರ್ನಾಟಕ ಸಂಘಟನೆ ರಾಜ್ಯ ಅಧ್ಯಕ್ಷ ಡಾ. ಬಿ.ಎನ್.ಜಗದೀಶ್ ಮತನಾಡಿ, ರಾಜ್ಯದಲ್ಲಿ ಮರಾಠ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ದಯಮಾಡಿ ಶೇಕಡಾ ಎಷ್ಟು ಮರಾಠ ಜನಾಂಗದವರಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಬಂದ್​ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಜಯ ಕರ್ನಾಟಕ ಸಂಘಟನೆ

ನಮ್ಮ ರಾಜ್ಯದ ಕೊರಚ, ಕೊರಮ, ಸವಿತಾ, ಮಡಿವಾಳ, ಕಮ್ಮಾರ, ಕುಂಬಾರ, ಒಕ್ಕಲಿಗ ಇತ್ಯಾದಿ ಸಮಾಜದಂತಹ ಕೆಲ ವರ್ಗಗಳಿಗೆ ಇನ್ನೂ ಸಹ ಅಭಿವೃದ್ಧಿ ಪ್ರಾಧಿಕಾರಗಳಿಲ್ಲ. ಇಂತಹ ಸಂದರ್ಭದಲ್ಲಿ ವಲಸಿಗರಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಇದು ದುರಂತ. ಮರಾಠಿ ನಗಮವೆಂದರೆ ಮರಾಠಿ ಭಾಷೆ ಮಾತನಾಡುವ ಕನ್ನಡಿಗರಿಗೂ ಅದರ ಸಹಕಾರ ಸಿಗುತ್ತಾ ಅಥವಾ ಅದು ಒಂದು ವರ್ಗ ಮತ್ತು ಜನಾಂಗಕ್ಕೆ ಅಷ್ಟೇನಾ ಎಂದು ತಾವು ತಿಳಿಸಬೇಕಿದೆ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಒಕ್ಕೂಟಗಳು ಡಿಸೆಂಬರ್‌ 5ರಂದು ನೀಡಿರುವ ಬಂದ್​ಗೆ ನಮ್ಮ ಬೆಂಬಲವಿದೆ ಎಂದರು.

ABOUT THE AUTHOR

...view details