ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣ: ರಷ್ಯಾ ವೆಬ್​ಸೈಟ್‌ನಲ್ಲೂ ಅಪ್​ಲೋಡ್​ ಆಗಿತ್ತಂತೆ ವಿಡಿಯೋ..!? - ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆ ಸುದ್ದಿ

ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂದು ಹೇಳಿ ನಿನ್ನೆ ವಶಕ್ಕೆ ಪಡೆದಿದ್ದ ಐವರನ್ನು ಅಧಿಕಾರಿಗಳು ರಿಲೀಸ್​ ಮಾಡಿದ್ದಾರೆ.

Jarkiholi CD case investigation by SIT
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

By

Published : Mar 13, 2021, 10:25 AM IST

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣವನ್ನು ಸದ್ಯ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಎಸ್ಐಟಿ ಅಧಿಕಾರಿಗಳು ನಿನ್ನೆ ಐವರನ್ನು ವಶಕ್ಕೆ ಪಡೆದಿದ್ದರು. ಸಿಡಿ ವಿಚಾರವಾಗಿ ಐದು ಜನರನ್ನು ತೀವ್ರ ತನಿಖೆಗೆ ಒಳಪಡಿಸಿದ ಬಳಿಕ, ಅವರನ್ನು ವಾಪಸ್ ಕಳುಹಿಸಿದೆ‌. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿ ಕಲೆ ಹಾಕಿದ್ದಾರೆ.

ರಷ್ಯಾ ವೆಬ್​ಸೈಟ್‌ನಲ್ಲಿಯೂ ಅಪ್​ಲೋಡ್​ ಆಗಿತ್ತಂತೆ ವಿಡಿಯೋ.!

ನಕಲಿ ವಿಪಿಎನ್ ಮೂಲಕ ರಷ್ಯಾದಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದರಂತೆ. ಅಲ್ಲದೇ ನಕಲಿ ವಿಪಿಎನ್​ ಬಳಸಿದ ಹ್ಯಾಕರ್‌ನ ಮಾಹಿತಿ ಸಹ ದೊರೆತಿದೆಯಂತೆ. ಪೊಲೀಸ್ ಭೀತಿಯಿಂದ ಸಾಮಾಜಿಕ ಜಾಲತಾಣಗಳಿಂದಲೂ ಆತ ಡಿಆ್ಯಕ್ಟಿವೇಟ್​ ಆಗಿದ್ದಾನೆ ಎನ್ನಲಾಗಿದೆ‌.

ಚೆನ್ನೈನಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಎಸ್​ಐಟಿ:

ಪ್ರಕರಣದಲ್ಲಿ ನಾಪತ್ತೆಯಾಗಿರುವ ಇಬ್ಬರ ಮೊಬೈಲ್​ ಫೋನ್​ ಮೂರು ದಿನಗಳ ಹಿಂದೆ ಗೌರಿಬಿದನೂರಿನಲ್ಲಿ ಸ್ವಿಚ್ ಆಫ್ ಆಗಿರುವುದು ಬೆಳಕಿಗೆ ಬಂದಿದೆಯಂತೆ. ಇವರು ಆಂಧ್ರದಲ್ಲಿ ತಲೆಮರೆಸಿಕೊಂಡಿರಬಹುದೆಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತಂತೆ‌. ಆರೋಪಿಗಳ ಜಾಡು ಹಿಡಿದು ಹೋದ ಎಸ್ಐಟಿ ಚೆನ್ನೈನಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಚಳ್ಳಕೆರೆ ಇಒ ಶ್ರೀಧರ್

ABOUT THE AUTHOR

...view details