ಕರ್ನಾಟಕ

karnataka

ETV Bharat / state

ಸಚಿವ ಸ್ಥಾನಕ್ಕಾಗಿ ಸಿಎಂ ದುಂಬಾಲು ಬಿದ್ದ ಜಾರಕಿಹೊಳಿ, ಯೋಗೇಶ್ವರ್: ಅಮಿತ್ ಶಾ ಭೇಟಿ ಮಾಡಿದ ರಾಜ್ಯ ನಾಯಕರು

ಅಮಿತ್​ ಶಾ ಭೇಟಿಗಾಗಿ ಶಾಸಕರ ಒತ್ತಡ- ಸಿಎಂ ಹಿಂದೆ ಸುತ್ತುತ್ತಿರುವ ರಮೇಶ್​ ಜಾರಕಿಹೊಳಿ, ಯೋಗೇಶ್ವರ್ ​​- ಅಮಿತ್​ ಶಾ ಮುಂದೆ ಸಂಪುಟ ವಿಸ್ತರಣೆ ಪ್ರಸ್ತಾಪ

ಸಚಿವ ಸ್ಥಾನಕ್ಕಾಗಿ ಸಿಎಂ ದುಂಬಾಲು ಬಿದ್ದ ಜಾರಕಿಹೊಳಿ, ಯೋಗೀಶ್ವರ್: ಅಮಿತ್ ಶಾ ಭೇಟಿ ಮಾಡಿದ ರಾಜ್ಯ ನಾಯಕರು
jarakiholi-yogeshwar-pressurizing-cm-for-meeting-with-amit-shah

By

Published : Dec 31, 2022, 11:32 AM IST

ಬೆಂಗಳೂರು:ಸಚಿವ ಸಂಪುಟ ವಿಸ್ತರಣೆಗೆ ಆಕಾಂಕ್ಷಿಗಳಾದ ರಮೇಶ್ ಜಾರಕಿಹೊಳಿ ಮತ್ತು ಸಿಪಿ ಯೋಗೇಶ್ವರ್ ಪಟ್ಟು ಹಿಡಿದಿದ್ದು, ಅಮಿತ್ ಶಾ ಜೊತೆ ಮಾತುಕತೆ ನಡೆಸುವಂತೆ ಬೆಂಬಿಡದೇ ಸಿಎಂ ಮೇಲೆ ಒತ್ತಾಯ ಹಾಕಿದ್ದಾರೆ. ಮುಂಜಾನೆಯಿಂದಲೇ ಹಿಂದೆ ಮುಂದೆಯೇ ಶತಪಥ ಸುತ್ತಿರುವ ಇವರ ಒತ್ತಡಕ್ಕೆ ಕಡೆಗೂ ಮಣಿದ ಸಿಎಂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೂಲಕ ಅಮಿತ್ ಶಾ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತ ನಿವಾಸದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ರಮೇಶ್ ಜಾರಕಿಹೊಳಿ, ಸಿಪಿ ಯೋಗೇಶ್ವರ್ ಮಾತುಕತೆ ನಡೆಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಮಾತುಕತೆ ನಡೆಸಲಾಯಿತು. ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳು ಒತ್ತಡ ಹೇರಿದರು. ನಂತರ ಅಮಿತ್ ಶಾ ಜೊತೆ ಮಾತುಕತೆ ನಡೆಸಿ ಗಮನಕ್ಕೆ ತರುವುದಾಗಿ ಸಿಎಂ ಭರವಸೆ ನೀಡಿದರು ಎನ್ನಲಾಗಿದೆ. ಅಲ್ಲದೇ, ಪ್ರಹ್ಲಾದ್ ಜೋಶಿಗೂ ಜಾರಕಿಹೊಳಿ, ಯೋಗೀಶ್ವರ್ ದುಂಬಾಲು ಬಿದ್ದರು. ಅಂತಿಮವಾಗಿ ಎಲ್ಲ ನಾಯಕರೂ ಅಮಿತ್ ಶಾ ಭೇಟಿಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಒಟ್ಟಿಗೆ ತೆರಳಿದರು.

ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ರದ್ದು ಮಾಡಿದ್ದ ಅಮಿತ್ ಶಾ, ದೇವನಹಳ್ಳಿಗೆ ತೆರಳುವ ಮುನ್ನ ಸಿಎಂ, ಅರುಣ್ ಸಿಂಗ್, ಕಟೀಲ್, ಪ್ರಹ್ಲಾದ್ ಜೋಶಿ ಆಗಮಿಸಿದ ಹಿನ್ನೆಲೆಯಲ್ಲಿ ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದರು ಎನ್ನಲಾಗಿದೆ. ಜೋಷಿ ಮೂಲಕ ಸಚಿವ ಸಂಪುಟ ವಿಸ್ತರಣೆ ಅಪೇಕ್ಷೆ ಕುರಿತು ಪ್ರಸ್ತಾಪವನ್ನು ಅಮಿತ್ ಶಾ ಮುಂದುರಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಅಮಿತ್ ಶಾ ಬ್ರೇಕ್ ಫಾಸ್ಟ್ ಮೀಟಿಂಗ್ ರದ್ದು, ಸಂಪುಟ ವಿಸ್ತರಣೆಗೂ ಗ್ರಹಣ: ಸಿಎಂ ಜೊತೆ ಜಾರಕಿಹೊಳಿ ಮಾತುಕತೆ..!

ABOUT THE AUTHOR

...view details