ಬೆಂಗಳೂರು: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನವಾದ ಇಂದು ಜೇಮ್ಸ್ ಬಿಡುಗಡೆಯಾಗಿದ್ದು, ವರನಟ ಡಾ. ರಾಜ್ಕುಮಾರ್ ಕಾಲದ ವೈಭವ, ಉತ್ಸವ, ಉತ್ಸಾಹವನ್ನು ತಂದುಕೊಟ್ಟಿದೆ.
ಥಿಯೇಟರ್ಗಳಲ್ಲಿ ಡಾ.ರಾಜ್ ಕಾಲದ ಸಂಭ್ರಮ ತಂದುಕೊಟ್ಟ 'ಜೇಮ್ಸ್' - ಜೇಮ್ಸ್ ಕನ್ನಡ ಸಿನಿಮಾ ಬಿಡುಗಡೆ
ಬೆಂಗಳೂರಿನ ಗಾಂಧಿನಗರದ ಅನುಪಮಾ, ತ್ರಿವೇಣಿ ಮತ್ತು ಕಮಲಾನಗರ ಬಳಿ ಇರುವ ವೀರಭದ್ರೇಶ್ವರ ಚಿತ್ರಮಂದಿರಗಳಲ್ಲಿ ಇಂದು ಜೇಮ್ಸ್ ಚಿತ್ರ ತೆರೆಕಂಡಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರದ ಪ್ರಮುಖ ಚಿತ್ರಮಂದಿರಗಳಾದ ಗಾಂಧಿನಗರದ ಅನುಪಮಾ, ತ್ರಿವೇಣಿ ಮತ್ತು ಕಮಲಾನಗರ ಬಳಿ ಇರುವ ವೀರಭದ್ರೇಶ್ವರ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಕೆಲವು ಅಭಿಮಾನಿಗಳು ಭಾವುಕರಾದರು. ಈ ಪ್ರಮುಖ ಮೂರು ಥಿಯೇಟರ್ಗಳ ಮುಂದೆ ಸಾಗರದಂತೆ ಜನ ಸೇರಿದ್ದು ಕುಣಿದು ಕುಪ್ಪಳಿಸಿದರು.
ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ:ವಿಶ್ವದಾದ್ಯಂತ 4,000 ಸಾವಿರಾರು ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ. ರಾಜ್ ಸಿನಿಮಾಗಳಷ್ಟೇ ಪ್ರೀತಿಯಿಂದ ಜೇಮ್ಸ್ ಸಿನಿಮಾವನ್ನು ಅಪ್ಪು ಅಭಿಮಾನಿಗಳು ವೆಲ್ಕಮ್ ಮಾಡಿದ್ದಾರೆ.