ಬೆಂಗಳೂರು: ನಗರದ ವಿಠಲನಗರದ ಮುನೇಶ್ವರ ಬಡಾವಣೆಯಲ್ಲಿನ ಶನೇಶ್ವರ ದೇವಸ್ಥಾನಕ್ಕೆ ಶಾಸಕ ಜಮೀರ್ ಅಹಮದ್ ಖಾನ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶನೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಅನ್ನ ಸಂತರ್ಷಣೆ ಮಾಡಿದ ಶಾಸಕರು ತಾವೇ ಖುದ್ದಾಗಿ ಭಕ್ತರಿಗೆ ಊಟ ಬಡಿಸಿದರು.
ಶನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜಮೀರ್ ಅಹ್ಮದ್ ಖಾನ್ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು ದೇವಸ್ಥಾನಕ್ಕೆ ಬಂದ ಶಾಸಕ ಜಮೀರ್ಗೆ ಆರತಿ ಮಾಡಿ ಸ್ಥಳೀಯ ಮಹಿಳೆಯರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆಜಾದ್ ನಗರದ ಉಸ್ತುವಾರಿ ಡಿ. ಸಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಆಗಮಿಸಿದ ಜಮೀರ್ ಅಹ್ಮದ್ ಅವರಿಗೆ ಆರತಿ ಬೆಳಗಿದ ಸಂದರ್ಭ ಮಹಿಳೆಯರು ಕುಂಕುಮವಿಟ್ಟು ಬರಮಾಡಿಕೊಂಡರು. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದು, ಜಮೀರ್ಗೆ ಜೈಕಾರ ಕೂಗಿದರು. ದೇವಸ್ಥಾನದ ಪೂಜಾರಿ ಜಮೀರ್ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿದರು.
ಓದಿ:ಟಿಕಾಯತ್ಗೆ ಮಸಿ ಬಳಿದ ಪ್ರಕರಣ: ಈ ಹುಚ್ಚುತನ ಸಹಿಸಲಾಗದು ಎಂದ ಗೃಹ ಸಚಿವರು