ಕರ್ನಾಟಕ

karnataka

ETV Bharat / state

ಪುತ್ರಿಯ ವಿವಾಹಕ್ಕೆ ಡಿಕೆಶಿಯನ್ನು ವಿಶಿಷ್ಟವಾಗಿ ಆಹ್ವಾನಿಸಿದ ಜಮೀರ್​​​​! - Jameer Ahamadkhan invited dkshi to daughter marrige

ಡಿ.ಕೆ.ಶಿವಕುಮಾರ್​ಗೆ ಜಮೀರ್ ಅಹಮದ್ ಖಾನ್ ಅತ್ಯಂತ ವಿಶಿಷ್ಟವಾದ ಮದುವೆ ಆಮಂತ್ರಣ ನೀಡುವ ಮೂಲಕ ಅವರನ್ನು ಮಗಳ ಮದುವೆಗೆ ಆಹ್ವಾನಿಸಿದ್ರು. ಇತ್ತ ನಟ ರಮೇಶ್​​ ಅರವಿಂದ್ ಕೂಡ ತಮ್ಮ ಮಗಳ ಮದುವೆ ಆರತಕ್ಷತೆಗೆ ಡಿಕೆಶಿ ಅವರನ್ನು ಆಹ್ವಾನಿಸಿದ್ರು.

ಪುತ್ರಿಯ ವಿವಾಹಕ್ಕೆ ವಿಶಿಷ್ಟವಾಗಿ ಡಿಕೆಶಿಯನ್ನು ಆಹ್ವಾನಿಸಿದ ಜಮೀರ್
ಪುತ್ರಿಯ ವಿವಾಹಕ್ಕೆ ವಿಶಿಷ್ಟವಾಗಿ ಡಿಕೆಶಿಯನ್ನು ಆಹ್ವಾನಿಸಿದ ಜಮೀರ್

By

Published : Jan 5, 2021, 8:20 PM IST

ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಇಂದು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ, ತಮ್ಮ ಮಗಳ ಮದುವೆಗೆ ಆಹ್ವಾನಿಸಿದ್ರು.

ಪುತ್ರಿಯ ವಿವಾಹಕ್ಕೆ ವಿಶಿಷ್ಟವಾಗಿ ಡಿಕೆಶಿಯನ್ನು ಆಹ್ವಾನಿಸಿದ ಜಮೀರ್

ಡಿ.ಕೆ.ಶಿವಕುಮಾರ್​ಗೆ ಜಮೀರ್ ಅಹಮದ್ ಖಾನ್ ಅತ್ಯಂತ ವಿಶಿಷ್ಟವಾದ ಮದುವೆ ಆಮಂತ್ರಣ ನೀಡಿದ್ರು. ಅರಬ್ ಶೈಲಿಯಲ್ಲಿ ವಿನ್ಯಾಸ ಮಾಡಲಾದ ಆಮಂತ್ರಣ ಕಿಟ್​ನಲ್ಲಿ ಡ್ರೈ ಫ್ರೂಟ್ಸ್ ಹಾಗೂ ಚಾಕಲೆಟ್​ಗಳನ್ನು ಜೋಡಿಸಿಡಲಾಗಿದೆ. ಈ ಉಡುಗೊರೆಯ ಜೊತೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಬರುವಂತೆ ಡಿ.ಕೆ.ಶಿವಕುಮಾರ್​ಗೆ ಆಹ್ವಾನಿಸಿದರು.

ಪುತ್ರಿ ಆರತಕ್ಷತೆಗೆ ಡಿಕೆಶಿ ಆಹ್ವಾನಿಸಿದ ರಮೇಶ್

ಪುತ್ರಿ ಆರತಕ್ಷತೆಗೆ ಆಹ್ವಾನಿಸಿದ ರಮೇಶ್:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ನಟ ರಮೇಶ್​​ ಅರವಿಂದ್, ತಮ್ಮ ಮಗಳ ಮದುವೆ ಆರತಕ್ಷತೆಗೆ ಆಹ್ವಾನಿಸಿದರು.

ಪುತ್ರಿ ಆರತಕ್ಷತೆಗೆ ಡಿಕೆಶಿ ಆಹ್ವಾನಿಸಿದ ರಮೇಶ್

ಕಳೆದ ವಾರ ಬೆಂಗಳೂರಿನ ಹೊರವಲಯದಲ್ಲಿ ರಮೇಶ್ ಅರವಿಂದ್ ಪುತ್ರಿ ವಿವಾಹ ಅದ್ಧೂರಿಯಾಗಿ ನೆರವೇರಿದ್ದು, ಇದೀಗ ಬೆರಳೆಣಿಕೆಯಷ್ಟು ಮಂದಿ ಆಹ್ವಾನಿತರ ಸಮ್ಮುಖದಲ್ಲಿ ಆರತಕ್ಷತೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದ್ದು, ಇವರಲ್ಲಿ ಡಿಕೆಶಿ ಕೂಡ ಒಬ್ಬರಾಗಿದ್ದಾರೆ.

ಓದಿ:ಕೇಂದ್ರ ಸಚಿವ ಸದಾನಂದಗೌಡ ಗುಣಮುಖ​: ಆಸ್ಪತ್ರೆಯಿಂದ ಡಿಸ್ಚಾರ್ಜ್​

ABOUT THE AUTHOR

...view details