ಬೆಂಗಳೂರು:ನಗರದ ರೈಲ್ವೆ ನಿಲ್ದಾಣದ ಮೇಲೆ ದಾಳಿ ನಡೆಸುವುದಾಗಿ ಜೈಷೆ ಉಗ್ರರು ರವಾನಿಸಿರುವ ಸಂದೇಶದ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ರೈಲು ನಿಲ್ದಾಣದ ಮೇಲೆ ಜೈಷೆ ಉಗ್ರರ ಕಣ್ಣು... ಆಯುಕ್ತ ಭಾಸ್ಕರ್ ರಾವ್ ಏನಂದ್ರು? - ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ
ಬೆಂಗಳೂರಿನ ರೈಲ್ವೆ ನಿಲ್ದಾಣದ ಮೇಲೆ ಜೈಷ್ -ಎ-ಮೊಹಮ್ಮದ್ ದಾಳಿ ವದಂತಿ ಕುರಿತ ಯಾವುದೇ ಅಲರ್ಟ್ ಮಾಹಿತಿ ತನಿಖಾ ಸಂಸ್ಥೆಗಳಿಂದ ಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದ್ದಾರೆ.
ಅಂತಹ ಯಾವುದೇ ಅಲರ್ಟ್ ಮಾಹಿತಿ ತನಿಖಾ ಸಂಸ್ಥೆಗಳಿಂದ ನಮಗೆ ಬಂದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಭಯಕ್ಕೆ ಒಳಗಾಗಬಾರದು. ಒಂದು ವೇಳೆ ಹಾಗೆ ಬಂದ್ರು ಕೂಡ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಏನಿದು ಪ್ರಕರಣ....!
ಬೆಂಗಳೂರು ಸೇರಿದಂತೆ ದೇಶದ 12 ಮಹಾನಗರಗಳ ಮೇಲೆ ದಾಳಿ ಸಂಚು ರೂಪಿಸಲಾಗಿದೆ ಎಂದು ರೋಹ್ಟಕ್ ರೈಲ್ವೆ ಎಸ್ಪಿ ಗೆ ಜೈಷ್ -ಎ ಮೊಹಮ್ಮದ್ ಉಗ್ರ ಸಂಘಟನೆ ಪತ್ರ ರವಾನೆ ಮಾಡಿದೆ. ಹೀಗಾಗಿ ಉಗ್ರರ ಪತ್ರ ಸಿಕ್ಕಿದ ಕೂಡಲೇ ಕೇಂದ್ರ ಗುಪ್ತಚರ ಇಲಾಖೆ ರೋಹ್ಟರ್, ಮುಂಬೈ, ಚೆನ್ನೈ, ಬೆಂಗಳೂರು ಸೇರಿ 12 ನಗರಗಳ ದಲ್ಲಿ ಅಲರ್ಟ್ ಇರುವಂತೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ರವಾನೆ ಮಾಡಿದೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದೀಗ ನಗರ ಪೊಲೀಸರು ಅಂತಹ ಮಾಹಿತಿ ಬಂದಿಲ್ಲ ನಮಗೆ ಎಂದು ಸ್ಪಷ್ಟನೆ ನೀಡಿದ್ದಾರೆ.