ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್‌ಕುಮಾರ್ ಈ ಮಹಾನ್ ನಟನ ಭೇಟಿ ಮಾಡುವುದು ಅವರ ಜೊತೆ ಊಟ ಮಾಡುವುದು ಹಾಗೇ ಅವರ ಜೊತೆ ಕಾಲ ಕಳೆದಿರುವವರೇ ಅದೃಷ್ಟವಂತರು. ಈ ನಟಸಾರ್ವಭೌಮ ಇಂದು ಬದುಕಿದ್ದರೆ ಸಾವಿರಾರು ಅಭಿಮಾನಿಗಳ ಜೊತೆ 94ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದರು ಎಂದು ನವರಸ ನಾಯಕ ಜಗ್ಗೇಶ್ ಸ್ಮರಿಸಿದರು. ವರ ನಟ ಡಾ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಮಾತನಾಡಿದ ಅವರು, ಅಭಿಮಾನಿಗಳು ರಾಜ್ಯಾದ್ಯಂತ ತಮ್ಮ ಹುಟ್ಟು ಹಬ್ಬದಂತೆ ಅಣ್ಣಾವ್ರ ಜನ್ಮ ದಿನವನ್ನ ಆಚರಣೆ ಮಾಡ್ತಾರೆ ಎಂದು ಹೇಳಿದ್ರು.
ರಾಜ್‌ಕುಮಾರ್ ಅವರಿಂದ ನಾವು ಎಷ್ಟೋ ವಿಚಾರಗಳನ್ನು ಕಲಿತಿದ್ದೇವೆ. ಕುಟುಂಬ, ಭಾಷೆ, ಸಿನಿಮಾ ಎಂದರೇನು ಎಂಬುದನ್ನೆಲ್ಲ ಅವರಿಂದ ನೋಡಿ ಕಲಿಯಬೇಕು. ನನ್ನೊಳಗೆ ಅವರ ಬಗ್ಗೆ ಪ್ರೀತಿ ಇಂದಿಗೂ ಇದೆ. ಅವರು ಹೇಳಿದ ಎಲ್ಲ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇನೆ. ಬ್ರಾಹ್ಮಣರು ಮಾತ್ರ ಬೆಳಗ್ಗೆ ಎದ್ದು ಸಂಧ್ಯಾವಂದನೆ ಮಾಡುತ್ತಾರೆ ಎಂಬ ಮಾತಿತ್ತು. ಆದರೆ ಯಾರಿಗೂ ಗೊತ್ತಿಲ್ಲದ ವಿಚಾರ ಏನೆಂದರೆ, ರಾಜ್‌ಕುಮಾರ್ ಕೂಡ ಸಂಧ್ಯಾವಂದನೆ ಮಾಡುತ್ತಿದ್ದರು. ಅವರು ಹೇಳಿದ್ದನ್ನು ನಾನು ಇಂದಿಗೂ ಪಾಲಿಸುತ್ತಿದ್ದೇನೆ. ನನ್ನ ಎಲ್ಲ ಪೂಜೆ ಮುಗಿದ ಬಳಿಕ ಮರೆಯದೇ 28 ಶ್ಲೋಕಗಳನ್ನು ಹೇಳಿಯೇ ನಾನು ಮನೆಯಿಂದ ಹೊರ ಬರುವುದು. ಅವರು ಅಂದೇ ಇದನ್ನೆಲ್ಲ ಮಾಡುತ್ತಿದ್ದರು ಅಂತಹ ದೊಡ್ಡ ಸಂತ ಅವರು ಎಂದು ಜಗ್ಗೇಶ್ ಅವರು ಬಣ್ಣಿಸಿದರು.
ಇನ್ನು ಜಗ್ಗೇಶ್ ತಮ್ಮ ಜೀವನದಲ್ಲಿ ಒಂದು ದೊಡ್ಡ ಕಹಿ ಘಟನೆ ನೆನೆದು, 1993ರಲ್ಲಿ ನಾನು ಸ್ಟಾರ್ ಆಗಿದೆ. ಆ ಸಮಯದಲ್ಲಿ ಅಪ್ಪ ಅಮ್ಮನ ಮಾತು ಕೇಳಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಶುರು ಮಾಡ್ತಾರೆ. ಆ ಸಮಯದಲ್ಲಿ 50 ಲಕ್ಷ ರೂಪಾಯಿನ್ನ ಈ ಟ್ರಾವೆಲ್ಸ್ ಬ್ಯುಸಿನೆಸ್ಗೆ ಇನ್ವೆಸ್ಟ್ ಮಾಡ್ತಾರೆ. ಇದಾದ ಬಳಿಕ ಈ ವ್ಯವಹಾರ ಹಾಲಾಗುತ್ತೆ. ಆಗ ಒಂದು ಬಸ್ಸು ಆಕ್ಸಿಡೆಂಟ್ ಆಗಿ 12 ಜನ ಸಾವನ್ನಪ್ಪುತ್ತಾರೆ. ಆಗ ನನ್ನ ಮೇಲೆ ಕೇಸ್ ದಾಖಲಾಗುತ್ತೆ. ಈ ಸಂಬಂಧ ಕೇಸ್ ಗೆಲ್ಲಲು ದಾಖಲಾತಿಗಳನ್ನು ಹೊಂದಿಸ್ತಾ ಇರ್ತೀನಿ. ಆದರೆ ನಮ್ಮವರು ಇನ್ಶೂರೆನ್ಸ್ ಕಟ್ಟಿರುವುದಿಲ್ಲ. ಆಗ ನನ್ನ ತಲೆ ಮೇಲೆ ದೊಡ್ಡ ಮಟ್ಟದ ದಂಡ ಹಾಕ್ತಾರೆ.
ಬಸ್ಸು ಟ್ರಾವೆಲ್ಸ್ ಬಗ್ಗೆ ಗೊತ್ತಿಲ್ಲದೆ ಬೇರೆಯವರನ್ನ ನಂಬಿ ಇಷ್ಟು ಮಟ್ಟದ ನಷ್ಟ ಅನುಭವಿಸಿದೆ. ಅಷ್ಟೇ ಅಲ್ಲಾ ನಾನು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಈಗ ಎಲ್ಲಾ ಕಳೆದುಕೊಂಡು ಬೀದಿಗೆ ಬಂದೆ ತುಂಬಾ ನೋವು ಮಾಡಿಕೊಂಡು ಮೇಟಾಸೀಟ್ ಎಂಬ ವಿಷ ತಗೊಂಡು ಕುಡಿದು ಬಿಡ್ತಿನಿ. ಈ ವಿಷ್ಯ ತಿಳಿದ ನನ್ನ ಸಹೋದರ ಕೋಮಲ್ ಹಾಗು ಫೈಟ್ ಮಾಸ್ಟರ್ ಕೆ.ಡಿ ವೆಂಕಟೇಶ್ ಆಸ್ಪತ್ರೆಗೆ ಕರೆದುಕೊಂಡು ವಿಷವನ್ನು ತೆಗಿಸೋದಿಕ್ಕೆ ಟ್ರೈ ಮಾಡಿದ್ದಾರೆ. ಆಗ ಆಗೋಲ್ಲ ಅಂತಾ ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೆ. ಒಂದೂವರೆ ತಿಂಗಳು ನನಗೆ ಜ್ಞಾನ ಇರೋದಿಲ್ಲ. ಆಗ ಆ ಸಮಯದಲ್ಲಿ ಜಗ್ಗೇಶ್ ಆತುರಕ್ಕೆ ಬಿದ್ದು ನಾನು ತಪ್ಪು ಮಾಡಿದ್ದೆ ಎಂಬ ಖಿನ್ನತೆಗೆ ಒಳಗಾಗಿದ್ದೆ. ಆಗ ನನಗೆ ಒಂದು ಸತ್ಯ ಅರಿವಾಗುತ್ತೆ.