ಬೆಂಗಳೂರು: ಲಿಂಗಾಯತ ವೀರಶೈವ ಸಮೀಕ್ಷೆ ನಡೆಸಿ ಸಮಾಜವನ್ನು ಒಡೆಯಲು ಹೋಗಿದ್ರಿ. ಈಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಬಗ್ಗೆ ನಿಮಗೆ ಮಾತನಾಡುವ ನೈತಿಕತೆ ಇಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
'ಲಿಂಗಾಯತರ ಸಮಾಜ ಒಡೆಯಲು ಹೋದ ನೀವು ನಿಗಮದ ಬಗ್ಗೆ ಮಾತನಾಡಲು ಅರ್ಹರಲ್ಲ' - Maratha Development Corporation
ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಿರುವುದನ್ನು ನೀವು ಪ್ರಶ್ನಿಸೋಕೆ ಅರ್ಹರಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ಸಮಾಜ ಒಡೆಯುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಕಾಂಗ್ರೆಸ್ ಬಗ್ಗೆ ಹೇಳೋಕೆ ಏನು ಉಳಿದಿಲ್ಲ, ಮುಖ್ಯಮಂತ್ರಿಯಾಗಿ ಐದು ವರ್ಷ ಇದ್ರಿ. ಲಿಂಗಾಯತ ವೀರಶೈವ ಸಮೀಕ್ಷೆ ಮಾಡಿ ವಿಭಜನೆ ಮಾಡೋಕೆ ಮುಂದಾಗಿದ್ರಿ. ನೀವು ಯಾವುದೇ ಸಮುದಾಯ, ಜಾತಿ ನಿಗಮಗಳನ್ನು ಮಾಡಿಲ್ವಾ. ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಬೇಡಿಕೆ ಇತ್ತು. ನಿಗಮಗಳನ್ನು ಮಾಡುತ್ತಿರೋದು ಇದು ಮೊದಲಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಶೆಟ್ಟರ್ ಅದು ಸಿಎಂಗೆ ಬಿಟ್ಟ ವಿಚಾರ. ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಪತ್ ರಾಜ್ ನಿರಪರಾಧಿ ಆಗಿದ್ರೆ, ಯಾಕೆ ಓಡಿ ಹೋಗ್ಬೇಕಿತ್ತು. ಕಾನೂನು ಇದೆ, ಬೇಲ್ ತಗೊಬೇಕಿತ್ತಲ್ವಾ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೇಲ್ ತೆಗೆದುಕೊಂಡು ಹೊರಗೆ ಇಲ್ವಾ ಎಂದು ಕುಟುಕಿದ್ದಾರೆ.