ಕರ್ನಾಟಕ

karnataka

ETV Bharat / state

ರಾಜ್ಯ ವಕೀಲರ ಪರಿಷತ್​​​​​ನಲ್ಲಿ ನೋಂದಣಿಯಾಗದೆ ಜಗದೀಶ್ ವಕಾಲತ್ತು! - ದೆಹಲಿ ಬಾರ್ ಕೌನ್ಸಿಲ್

ಸಿಡಿ ಸಂತ್ರಸ್ತೆ ಪರ ವಕೀಲ ಕೆ.ಎನ್ ಜಗದೀಶ್ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ಕುರಿತು ಮಾಹಿತಿ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಸದಸ್ಯರಾದ ಎಸ್.ಬಸವರಾಜು ಅವರು ಪರಿಷತ್ ಮ್ಯಾನೇಜರ್​​ಗೆ ಸೂಚಿಸಿದ್ದರು. ಇದೀಗ ಅವರ ನೋಂದಣಿ ಕುರಿತು ಮಾಹಿತಿ ಲಭ್ಯವಾಗಿದ್ದು, ರಾಜ್ಯದ ವಕೀಲರ ಪರಿಷತ್​ನಲ್ಲಿ ಹೆಸರಿಲ್ಲ ಎಂಬುದು ದೃಢಪಟ್ಟಿದೆ.

jagadish
ವಕೀಲ ಜಗದೀಶ್

By

Published : Apr 1, 2021, 5:27 PM IST

Updated : Apr 1, 2021, 5:37 PM IST

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಎನ್. ಜಗದೀಶ್ ಕುಮಾರ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿ(ಕೆಎಸ್​​ಬಿಸಿ)ನಲ್ಲಿ ಕೆ.ಎನ್ ಜಗದೀಶ್ ಕುಮಾರ್ ಹೆಸರನ್ನೇ ನೋಂದಾಯಿಸಿಕೊಂಡಿಲ್ಲ ಎಂಬುದು ಬಹಿರಂಗವಾಗಿದೆ.

ಹಾಗೆಯೇ ಈ ಹೆಸರಿನಲ್ಲಿ ಯಾವುದೇ ವಕೀಲಿಕೆ ಸನ್ನದು ವರ್ಗಾವಣೆ ಕೋರಿ ಬಂದಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತು ತಿಳಿಸಿದೆ. ಅಲ್ಲದೇ ಒಂದು ವೇಳೆ ಜಗದೀಶ್ ಬೇರೆ ಯಾವುದೇ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರು ಭಾರತೀಯ ವಕೀಲರ ಪರಿಷತ್ತಿನ ನಿಯಮಗಳ ಪ್ರಕಾರ 6 ತಿಂಗಳ ಬಳಿಕ ರಾಜ್ಯದಲ್ಲಿ ವಕೀಲಿಕೆ ಮುಂದುವರೆಸುವಂತಿಲ್ಲ ಎಂದು ಕೆಎಸ್​​ಬಿಸಿ ಮಾಹಿತಿ ನೀಡಿದೆ.

ಕೆ.ಎನ್ ಜಗದೀಶ್ ಕುಮಾರ್ ಕುರಿತು ಮಾಹಿತಿ ನೀಡಿದ ರಾಜ್ಯ ವಕೀಲರ ಪರಿಷತ್

ವಕೀಲ ಕೆ.ಎನ್ ಜಗದೀಶ್ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ಕುರಿತು ಮಾಹಿತಿ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಸದಸ್ಯರಾದ ಎಸ್.ಬಸವರಾಜು ಅವರು ಪರಿಷತ್ ಮ್ಯಾನೇಜರ್​​ಗೆ ಸೂಚಿಸಿದ್ದರು. ಈ ಮೇರೆಗೆ ಮಾಹಿತಿ ನೀಡಿರುವ ಪರಿಷತ್ ಮ್ಯಾನೇಜರ್, ಕೆ.ಎನ್ ಜಗದೀಶ್ ಕುಮಾರ್ ಕೆಎಸ್​ಬಿಸಿಯಲ್ಲಿ ನೋಂದಾಯಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕೆ.ಎನ್ ಜಗದೀಶ್ ತಾವು ದೆಹಲಿ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ದೆಹಲಿ ಬಾರ್ ಕೌನ್ಸಿಲ್​ನಲ್ಲಿ ಪಡೆದಿಕೊಂಡಿರುವ ಎನ್ರೋಲ್ಮೆಂಟ್ ಐಡಿ ಕಾರ್ಡನ್ನು ಫೇಸ್​​ಬುಕ್​​ನಲ್ಲೂ ಪೋಸ್ಟ್ ಮಾಡಿಕೊಂಡಿದ್ದಾರೆ.

ವಕೀಲರ ಕಾಯ್ದೆ-1961ರ ನಿಯಮ 30ರ ಪ್ರಕಾರ ಯಾವುದೇ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡರೂ ಅವರು ದೇಶದ ಯಾವುದೇ ಕೋರ್ಟ್​​ನಲ್ಲಿ ವಕೀಲಿಕೆ ಮಾಡಬಹುದು. ಆದರೆ, ಕಾರ್ಯಕ್ಷೇತ್ರವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಯಿಸಿಕೊಂಡಾಗ 6 ತಿಂಗಳ ಒಳಗೆ ಯಾವ ರಾಜ್ಯದಲ್ಲಿ ವಕೀಲಿಕೆ ನಡೆಸುತ್ತಾರೋ ಅಲ್ಲಿನ ಪರಿಷತ್ತಿಗೆ ತಮ್ಮ ಸನ್ನದನ್ನು ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಭಾರತೀಯ ವಕೀಲರ ಪರಿಷತ್ತು ನಿಯಮ ಮಾಡಿದೆ.

ಇದನ್ನೂ ಓದಿ:ಸಿಡಿ ಪ್ರಕರಣ: ಮಲ್ಲೇಶ್ವರಂ ಅಪಾರ್ಟ್​ಮೆಂಟ್​ ಫ್ಲ್ಯಾಟ್​ನಲ್ಲಿ ಪೊಲೀಸರಿಂದ ಸ್ಥಳ ಮಹಜರು

Last Updated : Apr 1, 2021, 5:37 PM IST

ABOUT THE AUTHOR

...view details