ಬೆಂಗಳೂರು:ಬೊಮ್ಮಾಯಿ ಸಂಪುಟಕ್ಕೆ ಸೇರದಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸ್ವಾಭಿಮಾನ ಮತ್ತು ಗೌರವದಿಂದ ಈ ನಿರ್ಧಾರ ಕೈಗೊಂಡಿದ್ದು, ಬಹಳಷ್ಟು ಜನರು ನನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಮಾಜಿ ಸಿಎಂ ಆಗಿರುವ ಕಾರಣ ಮುಜುಗರ ಆಗಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದೇನೆ. ಯಡಿಯೂರಪ್ಪ ದೊಡ್ಡನಾಯಕ ಹೀಗಾಗಿ ನಾನು ಮಾಜಿ ಸಿಎಂ ಆದರೂ ಅವರ ಮಂತ್ರಿಮಂಡಲ ಸೇರಿದ್ದೆ. ಹಿಂದಿನ ಸರ್ಕಾರದಲ್ಲಿ ಯಡಿಯೂರಪ್ಪ ಬಿಟ್ಟು ಯಾರೇ ಸಿಎಂ ಆಗಿದ್ದರೂ ನಾನು ಸಂಪುಟ ಸೇರುತ್ತಿರಲಿಲ್ಲ ಈಗಲೂ ಅಷ್ಟೇ ಬೊಮ್ಮಾಯಿ ಮಾತ್ರವಲ್ಲ ಈಗ ಯಾರೇ ಸಿಎಂ ಆಗಿದ್ದರೂ ನಾನು ಸಚಿವನಾಗುತ್ತಿರಲಿಲ್ಲ ಎಂದರು.