ಬೆಂಗಳೂರು: ಜೆಡಿಎಸ್ನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಅಂತಾ ಈ ರೆಸಾರ್ಟ್ ನಲ್ಲಿ ಇದ್ದೇವೆ. ಯಾವಾಗ ಮೇಲಿನಿಂದ ಬುಲಾವ್ ಬರುತ್ತದೆಯೋ ಆವಾಗ ಇಲ್ಲಿಂದ ಹೋಗುತ್ತೇವೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.
ಎಲ್ಲರೂ ಒಟ್ಟಾಗಿರಬೇಕು ಅಂತಾನೇ ರೆಸಾರ್ಟ್ನಲ್ಲಿ ಇದ್ದೇವೆ ಅಷ್ಟೆ: ಬಂಡೆಪ್ಪ ಕಾಶೆಂಪೂರ - undefined
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆಯಂತೆ ಜೆಡಿಎಸ್ ಶಾಸಕರೆಲ್ಲರೂ ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಬಗ್ಗೆ ಕಾಶೆಂಪೂರ ಮಾತನಾಡಿದ್ದು, ಮೇಲಿನಿಂದ ಯಾವಾಗ ಬುಲಾವ್ ಬರುವುದೋ ಆಗ ಇಲ್ಲಿಂದ ಹೋಗುತ್ತೇವೆ ಎಂದಿದ್ದಾರೆ.
ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಜೆಡಿಎಸ್ ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಅಂತ ಹೇಳಿದ್ದರಿಂದ ಇಲ್ಲಿಗೆ ಬಂದಿದ್ದೇವೆ. ಎಷ್ಟು ದಿನ ಇಲ್ಲಿ ಇರುತ್ತೇವೆ ಅನ್ನೋದು ನಮಗೆ ಗೊತ್ತಿಲ್ಲ. ಸಿಎಂ ಮತ್ತು ಹೈಕಮಾಂಡ್ ನಿಂದ ಯಾವಾಗ ನಮಗೆ ಬುಲಾವ್ ಬರುತ್ತದೆಯೋ ಆವಾಗ ಇಲ್ಲಿಂದ ಹೊರಡುತ್ತೇವೆ ಎಂದರು.
ಪ್ರತಿ ಮಂಗಳವಾರ ಮಾರಮ್ಮ ದೇವಿಯ ದರ್ಶನ ಪಡೆಯುವುದು ನನ್ನ ಪದ್ಧತಿ. ಅದೇ ರೀತಿಯಲ್ಲಿ ಇಂದು ಕೂಡ ದೇವನಹಳ್ಳಿಯಲ್ಲಿರುವ ಮಾರಮ್ಮ ದೇವಾಲಯಕ್ಕೆ ಹೋಗಿ ಬಂದಿರುವೆ ಎಂದರು. ರಾಜೀನಾಮೆ ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೇ ರೆಸಾರ್ಟ್ ಒಳಗೆ ಹೊರಟು ಹೋದರು.