ಕರ್ನಾಟಕ

karnataka

ETV Bharat / state

ಬಿಬಿಎಂಪಿಗೆ 10.18 ಕೋಟಿ ಆಸ್ತಿ ತೆರಿಗೆ ಪಾವತಿಸಿದ ಐಟಿಸಿ - ITC company paid the tax today

ಸ್ವಯಂ ಪ್ರೇರಿತರಾಗಿ ಐಟಿಸಿ ಲಿಮಿಟೆಡ್​ ಕಂಪನಿ ಬಿಬಿಎಂಪಿಗೆ ಪಾವತಿಸಬೇಕಾದ 10.18 ಕೋಟಿ ಆಸ್ತಿ ತೆರಿಗೆಯನ್ನು ಇಂದು ಚೆಕ್​ ಮೂಲಕ ಬಿಬಿಎಂಪಿ ಆಯುಕ್ತರಿಗೆ ಹಸ್ತಾಂತರಿಸಿದೆ.

ITC company paid the tax today
ಬಿಬಿಎಂಪಿಗೆ 10.18 ಕೋಟಿ ಆಸ್ತಿ ತೆರಿಗೆ ಪಾವತಿಸಿದ ಐಟಿಸಿ

By

Published : May 6, 2020, 12:16 AM IST

ಬೆಂಗಳೂರು: ಲಾಕ್​ಡೌನ್ ನಡುವೆಯು ಐಟಿಸಿ ಲಿಮಿಟೆಡ್ ಸಂಸ್ಥೆಯು ಬಿಬಿಎಂಪಿಗೆ 10.18 ಕೋಟಿ ಆಸ್ತಿ ತೆರಿಗೆ ಪಾವತಿಸಿದೆ.

ಬಿಬಿಎಂಪಿಗೆ 10.18 ಕೋಟಿ ಆಸ್ತಿ ತೆರಿಗೆ ಪಾವತಿಸಿದ ಐಟಿಸಿ

ನಗರದ ಮಾರುತಿ ಸೇವಾನಗರ ವಾರ್ಡ್-59 ವ್ಯಾಪ್ತಿಯಲ್ಲಿನ ಐಟಿಸಿ ಲಿಮಿಟೆಡ್ ಸಂಸ್ಥೆಯು 2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿ ಮಾಡಿದೆ. ಬಿಬಿಎಂಪಿ ಆಯುಕ್ತರು ಹಾಗೂ ಪೂರ್ವ ವಲಯ ಜಂಟಿ ಆಯುಕ್ತ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಿರುವ ಚೆಕ್​ಅನ್ನು ಸಂಸ್ಥೆಯ ಅಧಿಕಾರಿಗಳಿಂದ ಪಡೆದುಕೊಂಡರು.

ಆಸ್ತಿ ತೆರಿಗೆ ಚೆಕ್​ಅನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಸಹಾಯ ಕಂದಾಯ ಅಧಿಕಾರಿ ವೀಣಾ ಸ್ವೀಕರಿಸಿದ್ದಾರೆ. ಈ ಕಂಪನಿಯ ಬಾಣಸವಾಡಿ ಕಟ್ಟಡದ 10.2 ಕೋಟಿ ಹಾಗೂ ಜೀವನಹಳ್ಳಿ ಕಟ್ಟಡದ 16.13 ಲಕ್ಷ ರೂಪಾಯಿ ಸೇರಿ ಒಟ್ಟು 10.18 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿಸಲಾಗಿದೆ.

ಕೋವಿಡ್-19 ಕ್ಲಿಷ್ಟಕರ ಸಮಯದಲ್ಲಿ ಐಟಿಸಿ ಲಿಮಿಟೆಡ್ ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ತೆರಿಗೆ ಹಣವನ್ನು ಪಾವತಿದ್ದು, ಬಿಬಿಎಂಪಿಗೆ ಆರ್ಥಿಕ ಬಲ ತುಂಬಿದೆ. ಇದೇ ರೀತಿ ಬೇರೆ ಸಂಸ್ಥೆಗಳು ಮತ್ತು ಸಾರ್ವಜನಿಕರು ತೆರಿಗೆ ಪಾವತಿಸುವಂತೆ ಬಿಬಿಎಂಪಿ ಆಯುಕ್ತರು ಮನವಿ ಮಾಡಿದ್ದಾರೆ.

ABOUT THE AUTHOR

...view details