ಬೆಂಗಳೂರು: ಜೆಡಿಎಸ್ ಶಾಸಕರು ಬಿಜೆಪಿ ಸೇರ್ಪಡೆ ವಿಚಾರ ಏನು ಬೇಕಾದ್ರೂ ಆಗಬಹುದು. ಗೋವಾ, ಮಹಾರಾಷ್ಟ್ರದಲ್ಲಿ ನಡೆದ ಹಾಗೆ ನಡೆಯಬಹುದು. ಒಳ್ಳೆ ಕೆಲಸ ಯಾರು ಮಾಡ್ತಾರೋ ಅವರ ಜೊತೆ ಕೈ ಜೋಡಿಸಬಹುದು ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಶಾಸಕರ ಸೇರ್ಪಡೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಪರೇಷನ್ ಕಮಲದ ಬಗ್ಗೆ ಮಾಹಿತಿ ನೀಡಿದ್ರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ, ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದು ಅಪರಾಧ ಎಂದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿವಿಎಸ್ ಇಂತಹ ಕಾರ್ಯಗಳಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಸರಿಯಲ್ಲ. ಒಂದು ಸಾರಿ ಬಂಧನ ಆದ್ಮೇಲೆ ಕಾನೂನಾತ್ಮಕ ಕೆಲಸ ಮಾಡ್ತಾರೆ. ಎಫ್.ಐ.ಆರ್ ಮಾಡಿ ತಪ್ಪು ಮಾಡಿರೋದು ಗೊತ್ತಾದ ಮೇಲೆ ಅವರ ಕೆಲಸ ಅವರು ಮಾಡಿದ್ದಾರೆ. ಬಂಧನ ಆದ್ಮೇಲೆ ಕಾನೂನಾತ್ಮಕ ಕೆಲಸಗಳು ನೋಡ್ಬೇಕು ಅಷ್ಟೆ. ಈಗ ಬೀದಿಯಲ್ಲಿ ನಿಂತು ರಂಪಾಟ ಮಾಡಿದ್ರೆ ಏನೂ ಪ್ರಯೋಜನ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಚಿದಂಬರಂ ಒಳಗೆ ಇದ್ದಾರೆ. ಕಾಂಗ್ರೆಸ್ನ ಹಲವಾರು ಮುಖಂಡರು ಏನೆಲ್ಲಾ ಮಾಡಿದ್ದಾರೆ ನಿಮಗೂ ಗೊತ್ತಿದೆ. ಅವರ ಕಾಲದಲ್ಲಿ ನಡೆದ ಹಗರಣಗಳನ್ನ ಎತ್ತಿ ಹಿಡಿದಿದ್ದೇವೆ. ಕೋಲ್, ಹೆಲಿಕಾಫ್ಟರ್, ಆದರ್ಶ, ಏಶಿಯನ್ ಕ್ರೀಡೆಯಲ್ಲಿ ನಡೆದ ಹಗರಣಗಳು ಎಲ್ಲರಿಗೂ ಗೊತ್ತಿದೆ ಎಂದು ಡಿ.ಕೆ. ಶಿವಕುಮಾರ್ ಬಂಧನದ ಕುರಿತು ಸಮರ್ಥನೆ ನೀಡಿದ್ರು.