ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ: ಸ್ಪಷ್ಟನೆ ನೀಡಿದ ಐಟಿ ಇಲಾಖೆ
ನಿನ್ನೆ ನಸುಕಿನ ಜಾವ 2.45ರ ಸುಮಾರಿಗೆ ಆದಾಯ ತೆರಿಗೆ ಇಲಾಖೆ ದಾಳಿ ಪ್ರಕ್ರಿಯೆ ಮುಕ್ತಾಯಗೊಳಿಸುವಾಗ ರಮೇಶ್ ಕೂಡ ಇದ್ದರು. ಆದರೆ, ಆ ವೇಳೆ ತೆರಿಗೆ ಕಾಯ್ದೆ ಸೆಕ್ಷನ್ 131 ಹಾಗೂ ಸೆಕ್ಷನ್ 132 (4)ಬಿ ಅಡಿ ರಮೇಶ್ ಹೇಳಿಕೆ ದಾಖಲಿಸಿಕೊಂಡಿಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ರಮೇಶ್ ಆತ್ಮಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಇಲಾಖೆ ಸ್ಪಷ್ಟನೆ ನೀಡಿದೆ. ಅ.10 ರಂದು ಪರಮೇಶ್ವರ್ ಮನೆ ಮೇಲೆ ದಾಳಿ ನಡೆಸಿದಾಗ ಅವರು ಮನೆಯಲ್ಲಿರಲಿಲ್ಲ. ಕಾರ್ಯಕ್ರಮದ ನಿಮಿತ್ತ ಕೊರಟಗೆರೆಗೆ ಹೋಗಿದ್ದರು. ಬಳಿಕ ಕೊರಟಗೆರೆಗೆ ಹೋಗಿ ಅವರನ್ನು ಅವರ ನಿವಾಸಕ್ಕೆ ಕರೆತರಲಾಗಿತ್ತು. ಇಡೀ ಐಟಿ ದಾಳಿಯ ಪ್ರಕ್ರಿಯೆ ಮುಕ್ತಾಯದವರೆಗೂ ಪರಮೇಶ್ವರ್ ಅವರ ಜೊತೆ ಅವರ ಪಿಎ ರಮೇಶ್ ಹಾಜರಿದ್ದರು.
ನಿನ್ನೆ ನಸುಕಿನ ಜಾವ 2.45ರ ಸುಮಾರಿಗೆ ದಾಳಿ ಪ್ರಕ್ರಿಯೆ ಮುಕ್ತಾಯಗೊಳಿಸಿವಾಗ ರಮೇಶ್ ಕೂಡ ಇದ್ದರು. ಆದರೆ, ಆ ವೇಳೆ ಆದಾಯ ತೆರಿಗೆ ಕಾಯ್ದೆ ಕಲಂ 131 ಹಾಗೂ ಕಲಂ 132(4)ಬಿ ಅಡಿ ರಮೇಶ್ ಹೇಳಿಕೆ ದಾಖಲಿಸಿಕೊಂಡಿಲ್ಲ. ಇಷ್ಟೇ ಅಲ್ಲದೇ, ಪರಮೇಶ್ವರ್ ಮನೆಯಲ್ಲಿ ದಾಳಿ ಸಂಬಂಧ ಪಂಚನಾಮೆ ವೇಳೆಯೂ ರಮೇಶ್ ಹಾಜರಿದ್ದರು ಎಂದು ಐಟಿ ಇಲಾಖೆ ಸ್ಪಷ್ಪಪಡಿಸಿದೆ.