ಕರ್ನಾಟಕ

karnataka

ETV Bharat / state

ಫೆದರ್​​​​ ಲೈಟ್​ ಕಂಪನಿಯ 20 ಶಾಖೆಗಳ ಮೇಲೆ ಐಟಿ ದಾಳಿ! - IT raid on Feather Lite Company,

ಫೆದರ್​ ಲೈಟ್​ ಕಂಪನಿ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದ ಮೇಲೆ ರಾಜ್ಯಾದ್ಯಂತ ಸುಮಾರು 20 ಶಾಖೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ಕಲೆಹಾಕುತ್ತಿದ್ದಾರೆ.

ಫೆದರ್​ ಲೈಟ್​ ಕಂಪನಿ

By

Published : Nov 14, 2019, 5:12 PM IST

ಬೆಂಗಳೂರು: ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರಿನ ವಸಂತ ನಗರದಲ್ಲಿರುವ ಫೆದರ್ ಲೈಟ್ ಕಂಪನಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ‌.

ಇಂದು ಬೆಳಗ್ಗೆ ರಾಜ್ಯಾದ್ಯಂತ ಫೆದರ್ ಲೈಟ್ ಕಂಪನಿಯ 20 ಶಾಖೆಗಳ ಮೇಲೆ ಐಟಿ ದಾಳಿ‌ ನಡೆಸಿರುವ ಮಾಹಿತಿ ಸಿಕ್ಕಿದೆ.

ಫೆದರ್​ ಲೈಟ್​ ಕಂಪನಿ

ಫೆದರ್ ಲೈಟ್ ಕಂಪನಿ ಫರ್ನೀಚರ್ ತಯಾರಿಕಾ ಕಂಪನಿ ಆಗಿದೆ. ಮೈಸೂರು ರಸ್ತೆಯಲ್ಲಿರುವ ಫೆದರ್ ಲೈಟ್ ಕಂಪನಿಯ ಫ್ಯಾಕ್ಟರಿ ಮೇಲೆ ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪ ಹಿನ್ನೆಲೆ ಈ ದಾಳಿ ನಡೆಸಿದ್ದು, ದಾಳಿಗೆ ಸುಮಾರು 80ಕ್ಕೂ ಅಧಿಕ ವಾಹನಗಳನ್ನು ಐಟಿ ಬಳಕೆ ಮಾಡಿಕೊಂಡಿದೆ.

ABOUT THE AUTHOR

...view details