ಬೆಂಗಳೂರು: ರಾಜ್ಯಾದ್ಯಂತ ಇರುವ ಎಂಬೆಸ್ಸಿ ಕಚೇರಿಗಳ ಗ್ರೂಪ್ ಮಾಲೀಕರ ಮನೆ ಸೇರಿದಂತೆ ಸುಮಾರು 50 ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಬಾಕಿ, ಆದಾಯ ಮರೆಮಾಚಿರುವ ಆರೋಪದ ಮೇಲೆ ದಾಳಿ ನಡೆದಿದ್ದು, ಬೆಳ್ಳಂಬೆಳಗ್ಗೆ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಗ್ರೂಪ್ನ ಎಂಡಿ ಜಿತು ವಿರ್ವಾನಿ, ನಿರ್ದೇಶಕ ನರಪತ್ ಸಿಂಗ್ ಚರೋರಿಯಾ ಮನೆಗಳು ಹಾಗೂ ಪ್ಲಾಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಮನೆ ಕಚೇರಿಗಳ ಮೇಲೆ ದಾಳಿ ನಡೆದಿದೆ.