ಕರ್ನಾಟಕ

karnataka

ETV Bharat / state

ಐಟಿ ದಾಳಿ ಪ್ರಕರಣ.. ಪರಮೇಶ್ವರ್ ಮತ್ತು ಆಪ್ತರು ಸಲ್ಲಿಸಿದ್ದ ದಾಖಲೆಗಳ ಪರಿಶೀಲನೆ - IT raid on Dr G Parmeshwar House

ಡಾ. ಜಿ ಪರಮೇಶ್ವರ್ ಹಾಗೂ ಆಪ್ತರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾದಾಗ, ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲೆಗಳಿಗೆ ಪ್ರತ್ಯುತ್ತರವಾಗಿ ದಾಖಲೆಗಳನ್ನ ತರುವಂತೆ ಸೂಚನೆ ನೀಡಲಾಗಿತ್ತು. ಹೀಗಾಗಿ ಪರಮೇಶ್ವರ್, ಮುನಿರಾಮಯ್ಯ ಮತ್ತು ಶಿವಕುಮಾರ್ ಕ್ವೀನ್ಸ್ ರಸ್ತೆಯ ಆದಾಯ ತೆರಿಗೆ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದರು.

ಪರಮೇಶ್ವರ್ ಮತ್ತು ಆಪ್ತರು ಸಲ್ಲಿಸಿದ್ದ ದಾಖಲೆಗಳ ಪರಿಶೀಲನೆ

By

Published : Oct 16, 2019, 11:17 PM IST

ಬೆಂಗಳೂರು:ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಮನೆ, ಕಚೇರಿ ಹಾಗೂ ಸಿದ್ದಾರ್ಥ ಇನ್ಸ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮೇಶ್ವರ್, ಅಣ್ಣನ ಮಗ ಆನಂದ್ ಆಪ್ತರಾದ ಮುನಿರಾಮಯ್ಯ ಹಾಗೂ ಶಿವಕುಮಾರ್ ಸಲ್ಲಿಸಿರುವ ದಾಖಲೆಗಳ ಪರಿಶೀಲನೆಯಲ್ಲಿ ಐಟಿ ಅಧಿಕಾರಿಗಳು ತೊಡಗಿದ್ದಾರೆ.

ಡಾ.ಜಿ ಪರಮೇಶ್ವರ್ ಹಾಗೂ ಆಪ್ತರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾದಾಗ, ಐಟಿ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲೆಗಳಿಗೆ ಪ್ರತ್ಯುತ್ತರವಾಗಿ ದಾಖಲೆಗಳನ್ನ ತರುವಂತೆ ಸೂಚನೆ ನೀಡಿದ್ದರು. ಹೀಗಾಗಿ ಪರಮೇಶ್ವರ್, ಮುನಿರಾಮಯ್ಯ ಮತ್ತು ಶಿವಕುಮಾರ್ ಕ್ವೀನ್ಸ್ ರಸ್ತೆಯ ಆದಾಯ ತೆರಿಗೆ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದರು.

ಸದ್ಯ ಐಟಿ ದಾಳಿ ನಡೆಸಿದಾಗ ತೆಗೆದುಕೊಂಡ ದಾಖಲೆ ಹಾಗೂ ಡಾ.ಜಿ ಪರಮೇಶ್ವರ್ ಮತ್ತು ಆಪ್ತರು ಸಲ್ಲಿಕೆ ಮಾಡಿರುವ ದಾಖಲೆಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದು, ಮೂರು ದಿನಗಳ ನಂತರ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

ABOUT THE AUTHOR

...view details