ಕರ್ನಾಟಕ

karnataka

ETV Bharat / state

ಆಟೊ ಚಾಲಕನ ಮನೆ ಮೇಲೆ ಐಟಿ ದಾಳಿ, ಕೋಟ್ಯಂತರ ರೂ. ವಿಲ್ಲಾ ನೋಡಿ ಅಧಿಕಾರಿಗಳು ಶಾಕ್​! - IT raid

ದಿಡೀರ್​ ಶ್ರೀಮಂತನಾಗಿದ್ದ ಆಟೋ ಚಾಲಕನೊಬ್ಬನ​​ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಶಾಕ್​ ನೀಡಿದ್ದಾರೆ.

ಆಟೋ ಚಾಲಕನ ಐಷಾರಾಮಿ ಮನೆ ಮೇಲೆ ಐಟಿ ದಾಳಿ

By

Published : May 1, 2019, 10:27 AM IST

ಬೆಂಗಳೂರು: ನಗರದಲ್ಲಿ ಆಟೊ ಚಾಲಕನೊಬ್ಬನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಆತನ ವಿಲ್ಲಾ ನೋಡಿ ಶಾಕ್​ ಆಗಿದ್ದಾರೆ.

ಐಟಿ ಅಧಿಕಾರಿಗಳ ನೋಟಿಸ್

ಏ. 16ರಂದು ಮೂವರು ಐಟಿ ಅಧಿಕಾರಿಗಳ ತಂಡ ಮಾಹಿತಿ ಮೇರೆಗೆ ವೈಟ್‌ ಫೀಲ್ಡ್‌ ಬಳಿ ಇರುವ ಸುಬ್ರಮಣಿ ಎಂಬ ಆಟೊ ಚಾಲಕನ ಐಷಾರಾಮಿ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ‌.ಆಟೊ ಓಡಿಸಿಕೊಂಡು ಸುಬ್ರಮಣಿ ಕೋಟಿಗಟ್ಟಲೇ ಬಂಡವಾಳ ಹೂಡಿ ವೈಟ್​ ಫೀಲ್ಡ್​ನಲ್ಲಿ ವಿಲ್ಲಾ ಖರೀದಿಸಿದ್ದ.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಐಟಿ ತಂಡ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದಿದೆ.ಅಲ್ಲದೆ ಸಿಕ್ಕಿರುವ ದಾಖಲೆಗಳ ಬಗ್ಗೆ ವಿವರಣೆ ನೀಡುವಂತೆ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details