ಬೆಂಗಳೂರು:ರಮೇಶ್ ಬಹಳ ಒಳ್ಳೆಯ ಹಾಗೂ ಪ್ರಾಮಾಣಿಕ ಹುಡುಗ. ನಮ್ಮ ಶಿಕ್ಷಣ ಸಂಸ್ಥೆಯ ಮೇಲೆ ಐಟಿ ದಾಳಿ ನಡೆದ ಹಿನ್ನೆಲೆಯಲ್ಲಿ ರಮೇಶ್ಗೆ ಧೈರ್ಯವಾಗಿ ಇರೋದಕ್ಕೆ ಹೇಳಿದ್ದೆ. ಐಟಿ ಅಧಿಕಾರಿಗಳು ಏನು ಪ್ರಶ್ನೆ ಕೇಳಿದ್ರೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಆತ್ಮಹತ್ಯೆಗೆ ಪ್ರತಿಕ್ರಿಯಿಸಿದ್ದಾರೆ.
ಐಟಿ ಅಧಿಕಾರಿಗಳು ಏನಾದ್ರೂ ಕೇಳಬೇಕೆಂದರೆ ನಮಗೆ ಕೇಳಬೇಕಿತ್ತು.. ಅದು ಬಿಟ್ಟು.. - bangalore latest news
ಪರಮೇಶ್ವರ್ ಅವರ ಆಪ್ತ ಸಹಾಯಕನಾಗಿದ್ದ ರಮೇಶ್ ಸಾವನ್ನಪ್ಪಿದ್ದ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣಕ್ಕೆ ಪರಮೇಶ್ವರ್ ಭೇಟಿ ನೀಡಿದರು. ರಮೇಶ್ ಪೋಷಕರಿಗೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಪರಮೇಶ್ವರ್ ಅವರ ಆಪ್ತ ಸಹಾಯಕನಾಗಿದ್ದ ರಮೇಶ್ ಸಾವನ್ನಪ್ಪಿದ್ದ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣಕ್ಕೆ ಪರಮೇಶ್ವರ್ ಭೇಟಿ ನೀಡಿದರು. ರಮೇಶ್ ಪೋಷಕರಿಗೆ ಹಾಗೂ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಬೆಳಗಿನ ಜಾವ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ ದಾಳಿ ಅಂತ್ಯಗೊಳಿಸಿದರು. ನಂತರ ರಮೇಶ್ಗೆ ಧೈರ್ಯವಾಗಿರು ಎಂದು ಹೇಳಿದ್ದೆ. ಆದಾದ ಕೆಲ ಸಮಯದ ನಂತರ ರಮೇಶ್ ಆತ್ಮಹತ್ಯೆ ಮಾಡಿಕೊಂಡರುವ ಬಗ್ಗೆ ಮಾಹಿತಿ ಮಾಧ್ಯಮಗಳ ಮೂಲಕ ತಿಳಿಯಿತು. ಐಟಿ ಅಧಿಕಾರಿಗಳು ನನ್ನ ಮನೆ ಹತ್ತಿರ ರಮೇಶ್‌ನನ್ನು ಕರೆದುಕೊಂಡು ಬಂದು ದಾಳಿ ಮಾಡಿದ್ದೆ ಈ ಘಟನೆಗೆ ಕಾರಣ. ಇಲ್ಲದೇ ಹೋದರೆ ಸೂಸೈಡ್ ಮಾಡ್ಕೊಳ್ತಿರಲಿಲ್ಲ. ಐಟಿ ಅಧಿಕಾರಿಗಳು ಏನಾದ್ರು ಕೇಳಬೇಕು ಅಂದ್ರೆ ನಮ್ಮನ್ನ ಕೇಳಬೇಕೇ ಹೊರತು ಮುಗ್ಥನಾಗಿದ್ದ ರಮೇಶ್ ಅವರನ್ನು ವಿಚಾರಣೆ ಮಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.