ಕರ್ನಾಟಕ

karnataka

ETV Bharat / state

ಅಂತೂ ಪರಂ ನಿವಾಸದ ಮೇಲಿನ ದಾಳಿ ಅಂತ್ಯಗೊಳಿಸಿದ ಐಟಿ ಅಧಿಕಾರಿಗಳು - ಪರಮೇಶ್ವರ್ ಒಡೆತನದ ಸಂಘ-ಸಂಸ್ಥೆ

ಕೆಲ ದಿನಗಳಿಂದ ಸದಾಶಿವನಗರ ಬಳಿ‌ ಇರುವ ಪರಮೇಶ್ವರ್ ಒಡೆತನದ ಸಂಘ - ಸಂಸ್ಥೆ ಹಾಗೂ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಇಂದು ಬೆಳಗಿನ ಜಾವ 3:30ರ ಸುಮಾರಿಗೆ ಪರಮೇಶ್ವರ ನಿವಾಸದಿಂದ ದಾಳಿ ಮುಕ್ತಾಯಗೊಳಿಸಿದ್ದಾರೆ.

ಐಟಿ ದಾಳಿ

By

Published : Oct 12, 2019, 7:43 AM IST

ಬೆಂಗಳೂರು :ಕಳೆದೆರಡು ದಿನಗಳಿಂದ ಆದಾಯ ತೆರಿಗೆ ಅಧಿಕಾರಿಗಳು ತುಮಕೂರು, ನೆಲಮಂಗಲ, ಟಿ.ಬೇಗೂರು ಸೇರಿದಂತೆ ನಾನಾ ಭಾಗದಲ್ಲಿ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಒಡೆತನದ ಮನೆ ಹಾಗೂ ಶಿಕ್ಷಣ ಸಂಸ್ಥೆಯ ಮೇಲೆ ನಡೆಸಿದ್ದ ದಾಳಿ ಇಂದು ಮುಂಜಾನೆ ಬಹುತೇಕವಾಗಿ ಅಂತ್ಯಗೊಂಡಿದೆ.

ಕೆಲದಿನಗಳಿಂದ ಸದಾಶಿವನಗರ ಬಳಿ‌ ಇರುವ ಪರಮೇಶ್ವರ್ ನಿವಾಸದ ಮೇಲಿನ ದಾಳಿ ನಡೆಸಿದ ಐಟಿ ಅಧಿಕಾರಿಗಳು ಪರಮೇಶ್ವರ್ ಮನೆಯಲ್ಲೇ ಮೊಕ್ಕಾಂ ಹೂಡಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಆದ್ರೆ ಇಂದು‌ ಬೆಳಗಿನ ಜಾವ 3:30ರ ಸುಮಾರಿಗೆ ಪರಮೇಶ್ವರ್ ನಿವಾಸದಿಂದ ದಾಳಿ ಮುಕ್ತಾಯಗೊಳಿಸಿದ ಐಟಿ ಅಧಿಕಾರಿಗಳು ಸದ್ಯ ಅಲ್ಲಿಂದ ತೆರಳಿದ್ದಾರೆ. 89 ಲಕ್ಷ ರೂ ಹಾಗೂ ಅಘೋಷಿತ ಆಸ್ತಿ ದಾಖಲೆಗಳನ್ನ ಪರಮೇಶ್ವರ್ ಮನೆಯಿಂದ ಐಟಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಮತ್ತೊಂದೆಡೆ ಕಳೆದೆರೆಡು ದಿನಗಳಿಂದ ಐಟಿ ಅಧಿಕಾರಿಗಳ ಜೊತೆಗೆನೇ ಪರಮೇಶ್ವರ್ ಇದ್ದು, ಅಧಿಕಾರಿಗಳ ಪ್ರಶ್ನೆಗೆ ಉತ್ತರ ಹಾಗೂ ಅಗತ್ಯ ದಾಖಲೆಗಳನ್ನ ನೀಡಿದ್ದಾರೆ ಎನ್ನಲಾಗಿದೆ. ಐಟಿ ದಾಳಿ ಮುಕ್ತಾಯವಾಗಿದ್ದರೂ ಈಗಾಗ್ಲೆ ಐಟಿ ಪತ್ತೆ ಮಾಡಿರುವ ಆಸ್ತಿ ಹಾಗೂ ನಗದು ಇವುಗಳಿಗೆ ಮಾಜಿ ಡಿಸಿಎಂ ಪರಮೇಶ್ವರ್ ಸ್ಪಷ್ಟ ಉತ್ತರ ನೀಡಬೇಕಾಗುತ್ತದೆ.

ಹೀಗಾಗಿ ಮುಂದಿನ ಐಟಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿ ಪರಮೇಶ್ವರ್ ಅವರನ್ನ ಆದಾಯ ತೆರಿಗೆ ಇಲಾಖಾ ಕಚೇರಿಗೆ ಕರೆಸಿ ವಿಚಾರಣೆ ಮಾಡಲಿದ್ದಾರೆ. ಮತ್ತೊಂದೆಡೆ ಪರಮೇಶ್ವರ್ ಅಣ್ಣನ ಮಗ ಡಾ. ಆನಂದ್ ಗೊಲ್ಲಳ್ಳಿ ಶಿವಪ್ರಸಾದ್‌ ಈತನಿಗೆ ಈಗಾಗ್ಲೇ ಐಟಿ ಸಮನ್ಸ್ ಜಾರಿ ಮಾಡಿದ್ದು, ಈತ ಪರಮೆಶ್ವರ್ ಒಡೆತನದ ಮೆಡಿಕಲ್ ಕಾಲೇಜು ವ್ಯವಹಾರವನ್ನು ನೋಡಿಕೊಂಡು ಬಹಳಷ್ಟು ಅಕ್ರಮವಾಗಿ ಹಣ ಸಂಪಾದನೆ ಮಾಡಿರೋದು ಬಟಾ ಬಯಾಲಾಗಿದೆ. ಹೀಗಾಗಿ ಸದ್ಯ ಈತನಿಗೆ ಸಮನ್ಸ್ ಜಾರಿಯಾಗಿದ್ದು, ಐಟಿ ಈತನ ಬಳಿಯಿಂದ ಬಹಳಷ್ಟು ಮಾಹಿತಿ ಕಲೆಹಾಕಲಿದ್ದಾರೆ.

ABOUT THE AUTHOR

...view details