ದೊಡ್ಡಬಳ್ಳಾಪುರ:ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪರ ಮಗ ರಾಜೇಂದ್ರ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ವಿಚಾರಣೆಯನ್ನು ಮುಂದುವರೆಸಿದ್ದು, ಸದಸ್ಯರು ನೀಡುವ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲು ಮತ್ತೊಂದು ಪ್ರಿಂಟರ್ ತರಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಆರ್.ಎಲ್.ಜಾಲಪ್ಪನವರ ಮಗ ಜೆ.ರಾಜೇಂದ್ರ ಕುಮಾರ್ ಮನೆಯಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದು, ಕುಟುಂಬದ ಸದಸ್ಯರನ್ನು ಒಟ್ಟಿಗೆ ವಿಚಾರಣೆಗೊಳಪಡಿಸಿದ್ದಾರೆ. ಈ ಸಂಬಂಧ ಹೊರಗಿನಿಂದಲೇ ತಿಂಡಿ ಹಾಗೂ ವಾಟರ್ ಬಾಟಲ್ಗಳನ್ನು ತರಿಸಿದ್ದಾರೆ.