ಕರ್ನಾಟಕ

karnataka

ETV Bharat / state

ಸ್ಟೆಪ್ನಿಯಲ್ಲಿ 2.30 ಕೋಟಿ ಹಣ: ಮಾಜಿ ಶಾಸಕ ಅಪ್ಪಾಜಿಗೌಡಗೆ ಐಟಿ ನೋಟಿಸ್ - undefined

ಕಾರಿನ ಸ್ಟೆಪ್ನಿಯಲ್ಲಿ ಭಾರೀ ಹಣ ಪತ್ತೆಯಾಗಿದ್ದ ಪ್ರಕರಣ ಸಂಬಂಧ ಮಾಜಿ ಶಾಸಕರೊಬ್ಬರಿಗೆ ಐಟಿ ಇಲಾಖೆ ನೋಟಿಸ್​ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ಮಾಜಿ ಶಾಸಕ ಅಪ್ಪಾಜಿಗೌಡಗೆ ಐಟಿ ನೋಟಿಸ್

By

Published : Apr 23, 2019, 11:05 AM IST

ಬೆಂಗಳೂರು:ಕಾರಿನ ಚಕ್ರದಲ್ಲಿ 2.30 ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಮಾಜಿ ಶಾಸಕ ಅಪ್ಪಾಜಿಗೌಡ ಅವರಿಗೆ ನೋಟಿಸ್ ಜಾರಿ‌ ಮಾಡಿದೆ.

ಹಣ ಪತ್ತೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಿದ್ದಾರೆ. ಕಳೆದ ಶನಿವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕಾರಿನ ಸ್ಟೆಪ್ನಿಯಲ್ಲಿ 2.30 ಕೋಟಿ ಹಣ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಾರು ಹಿಂಬಾಲಿಸಿ ತಪಾಸಣೆ ನಡೆಸಿದ್ದ ಐಟಿ ಅಧಿಕಾರಿಗಳು ಹಣ ವಶಕ್ಕೆ ಪಡೆದು ವಾಹನ ಚಾಲಕನನ್ನು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಅಪ್ಪಾಜಿ ಗೌಡರಿಗೆ ಹಣ ತಲುಪಿಸಲು ಹೊರಟ್ಟಿದ್ದೆ ಎಂದು ಚಾಲಕ ಹೇಳಿದ್ದಾನೆ. ಚಾಲಕನ ಮಾಹಿತಿ ಮೇರೆಗೆ ಮಾಜಿ ಶಾಸಕ ಅಪ್ಪಾಜಿಗೌಡರಿಗೆ ನೋಟಿಸ್ ನೀಡಿ ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿರುವುದರಿಂದ ಅಪ್ಪಾಜಿಗೌಡ ಅವರು ನಾಳೆ ಬೆಂಗಳೂರಿನ ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

For All Latest Updates

TAGGED:

ABOUT THE AUTHOR

...view details