ಕರ್ನಾಟಕ

karnataka

ETV Bharat / state

ಸರ್ಕಾರ ಎಡವಿರುವುದು ನಿಜ, ಆದ್ರೆ ರಾಜೀನಾಮೆ ಪರಿಹಾರವಲ್ಲ: ಹೆಚ್​.ಕೆ‌.ಪಾಟೀಲ್​​ - Devanahalli

ನಾನು ನಮ್ಮ ಪಕ್ಷದ ಶಾಸಕರಿಗೆ ಮನವಿ ಮಾಡ್ತೇನೆ. ಏನೇ ಭಿನ್ನಾಭಿಪ್ರಾಯಗಳಿದ್ದರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೆಚ್​.ಕೆ.ಪಾಟೀಲ್​ ಹೇಳಿದ್ದಾರೆ.

ಹೆಚ್ ಕೆ‌ ಪಾಟೀಲ್

By

Published : Jul 6, 2019, 9:30 PM IST

ಬೆಂಗಳೂರು: ಸರ್ಕಾರ ಎಡವಿರುವುದು ನಿಜ. ಆದ್ರೆ, ಪಕ್ಷ ಬಿಟ್ಟು ತೆರಳುವುದು, ರಾಜೀನಾಮೆ ನೀಡುವುದು ಅದಕ್ಕೆ ಪರಿಹಾರವಲ್ಲ ಎಂದು ಮಾಜಿ ಸಚಿವ, ಶಾಸಕ ಹೆಚ್.ಕೆ.ಪಾಟೀಲ್ ಹೇಳಿದರು.

ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಪಕ್ಷದ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂಬುದು ಮಾಧ್ಯಮದ ಮೂಲಕ ತಿಳಿಯಿತು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಅಧಿಕಾರಕ್ಕಾಗಿ ಈ ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ. ನಾನು ನಮ್ಮ ಪಕ್ಷದ ಶಾಸಕರಿಗೆ ಮನವಿ ಮಾಡ್ತೇನೆ. ಏನೇ ಭಿನ್ನಾಭಿಪ್ರಾಯಗಳಿದ್ದರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದರು.

ಸರ್ಕಾರ ಎಡವಿರುವುದು ನಿಜ: ಹೆಚ್.ಕೆ‌.ಪಾಟೀಲ್

ಕಾಂಗ್ರೆಸ್ ಪಕ್ಷ ಈಗ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಸಕರ ಈ ನಡೆ ಸರಿಯಲ್ಲ. ಶಾಸಕರು ತಮ್ಮ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡ್ತೇನೆ. ರಾಮಲಿಂಗಾರೆಡ್ಡಿಯಂತಹ ಹಿರಿಯ ನಾಯಕರ ಈ ನಡೆ ನಿರೀಕ್ಷಿಸಿರಲಿಲ್ಲ. ಸರ್ಕಾರ ಎಡವಿರುವುದು ನಿಜ. ಆದ್ರೆ, ಪಕ್ಷ ಬಿಟ್ಟು ತೆರಳುವುದು, ರಾಜೀನಾಮೆ ನೀಡುವುದು ಪರಿಹಾರವಲ್ಲ. ನಮ್ಮ ಶಾಸಕರನ್ನು ಹೈಕಮಾಂಡ್ ಮತ್ತು ನಾಯಕರು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.

For All Latest Updates

TAGGED:

Devanahalli

ABOUT THE AUTHOR

...view details