ಕರ್ನಾಟಕ

karnataka

ETV Bharat / state

ಲಾಭವಿಲ್ಲದೆ ಖಾಸಗಿ ಶಾಲೆ ನಡೆಸಲು ಆಗುವುದಿಲ್ಲ; ಶುಲ್ಕ ನಿಗದಿ ಸಮಿತಿ ರಚನೆ‌ ಪ್ರಸ್ತಾಪಕ್ಕೆ ವಿರೋಧ - Shashikumar secretary of Cams

ಆಯಾ ಶಿಕ್ಷಣ ಸಂಸ್ಥೆಗಳು ಲಾಭವಿಲ್ಲದೆ ಖಾಸಗಿ ಶಾಲೆ ನಡೆಸಲು ಆಗುವುದಿಲ್ಲ. ಶಾಲೆಯ ಖರ್ಚು ವೆಚ್ಚಕ್ಕೆ ಪೂರಕವಾಗಿ ಶುಲ್ಕ ನಿಗದಿ ಮಾಡುವ ಸಂಪೂರ್ಣ ಅಧಿಕಾರ ಇದೆ. ಯಾವುದೋ ಕಮಿಟಿ ಕೂತು ಖಾಸಗಿ ಶಾಲೆಗಳ ಶುಲ್ಕ ನಿಗಧಿ ಪಡಿಸುವುದು ಸರಿಯಲ್ಲ. ಈಗಾಗಲೇ ನಾವು ಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದೇವೆ..

Shashikumar and Lokesh Talikatte
ಶಶಿಕುಮಾರ್ ಹಾಗೂ ಲೋಕೇಶ್ ತಾಳಿಕಟ್ಟೆ

By

Published : Jun 15, 2021, 9:02 PM IST

ಬೆಂಗಳೂರು : ಖಾಸಗಿ ಶಾಲಾ ಶುಲ್ಕ ವಿಚಾರ ಸಂಬಂಧ ಜಟಾಪಟಿ ಮುಂದುವರೆದಿದೆ. ಶಾಲಾ ಶುಲ್ಕದ ವಿಚಾರವಾಗಿ ಆಡಳಿತ ಮಂಡಳಿಗಳು ಹಾಗೂ ಪೋಷಕರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟಿದ್ದವು. ಈ ವಿಚಾರವಾಗಿ ಸರ್ಕಾರ ಶಾಲಾ ಶುಲ್ಕ ನಿರ್ಧರಿಸುವ ಅಧಿಕಾರವನ್ನು ಕಳೆದುಕೊಂಡಿತ್ತು. ಈ ಕಾರಣದಿಂದ ಕಳೆದ ವರ್ಷ ಪೋಷಕರು ಶಾಲಾ ಆಡಳಿತ ಮಂಡಳಿಗಳ ನಡುವೆ ಸರ್ಕಾರ ಸಭೆಯನ್ನು ಏರ್ಪಡಿಸಿ ಶೇ. 30% ಶುಲ್ಕವನ್ನು ಕಡಿತ ಮಾಡುವ ಆದೇಶವನ್ನು ನೀಡಿತ್ತು. ಈ ಆದೇಶದ ವಿರುದ್ಧ ಕೆಲ ಆಡಳಿತ ಮಂಡಳಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.‌

ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿದರು

ಅದರ ಪರಿಣಾಮ, ಇಂದು ರಾಜ್ಯ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಶುಲ್ಕ ನಿರ್ಧರಿಸುವ ಸಮಿತಿಯನ್ನು ರಚಿಸಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದೆ. ಆದರೆ, ಶುಲ್ಕ ನಿಗದಿ ಸಮಿತಿ ರಚನೆ‌ ಪ್ರಸ್ತಾಪವನ್ನ ಕ್ಯಾಮ್ಸ್ ಸಂಘ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಶುಲ್ಕಕ್ಕೆ ಸಂಬಂಧಪಟ್ಟಂತೆ 2017ರಿಂದ ಪ್ರಶ್ನಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕಳೆದ ವರ್ಷದ ಅವೈಜ್ಞಾನಿಕ ಶೇ.70% ಶುಲ್ಕ ಕಟ್ಟಿಸಿಕೊಳ್ಳಬೇಕೆಂಬ ಆದೇಶ ಇತ್ತು. ಆದರೆ, ಇದಕ್ಕಿಂತ ಹೆಚ್ಚಾಗಿ ಶುಲ್ಕ ಕಡಿತ ಆಗುತ್ತಿರುವುದನ್ನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಬೇಕಾಯ್ತು. ಇದೀಗ ಕೋರ್ಟ್ ಮುಂದೆ ಸರ್ಕಾರ ಕಮಿಟಿ ರಚನೆಯ ಯೋಚನೆಯಲ್ಲಿ ಇದ್ದೇವೆ ಅಂತ ಐಎ ಅನ್ನ ಫೈಲ್ ಮಾಡಿದ್ದಾರೆ. ಇದನ್ನ ನಾವ್ಯಾರು ಒಪ್ಪಲು ಸಾಧ್ಯವಿಲ್ಲ ಅಂತ ತಿಳಿಸಿದ್ದಾರೆ.

ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾತನಾಡಿದರು

ಆಯಾ ಶಿಕ್ಷಣ ಸಂಸ್ಥೆಗಳು ಲಾಭವಿಲ್ಲದೆ ಖಾಸಗಿ ಶಾಲೆ ನಡೆಸಲು ಆಗುವುದಿಲ್ಲ. ಶಾಲೆಯ ಖರ್ಚು-ವೆಚ್ಚಕ್ಕೆ ಪೂರಕವಾಗಿ ಶುಲ್ಕ ನಿಗದಿ ಮಾಡುವ ಸಂಪೂರ್ಣ ಅಧಿಕಾರ ಇದೆ. ಯಾವುದೋ ಕಮಿಟಿ ಕೂತು ಖಾಸಗಿ ಶಾಲೆಗಳ ಶುಲ್ಕ ನಿಗದಿ ಪಡಿಸುವುದು ಸರಿಯಲ್ಲ. ಈಗಾಗಲೇ ನಾವು ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಅಂದರು.

ಶುಲ್ಕ ನಿಗದಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಈ‌ ಹಿಂದೆ ಕೋರಿದ್ದೆವು : ಖಾಸಗಿ ಶಾಲಾ ಶುಲ್ಕ‌ ಸಮಿತಿ ರಚನೆ ಕುರಿತು ರೂಪ್ಸಾ ಕರ್ನಾಟಕ ಸ್ವಾಗತಿಸಿದೆ. ಶುಲ್ಕ ನಿಗದಿ ಸಮಿತಿ ರಚಿಸುವಂತೆ ಕಳೆದ‌ ವರ್ಷವೇ ಸರ್ಕಾರಕ್ಕೆ ಮನವಿ ಮಾಡಿತ್ತು. ಇದೀಗ ಕೋರ್ಟ್​ಗೆ ಸರ್ಕಾರ ಮನವಿ ಮಾಡಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಶುಲ್ಕ ನಿರ್ಧರಿಸುವ ಸಮಿತಿಯನ್ನು ರಚಿಸಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದೆ. ಇದು ರಾಜ್ಯದ ಬಜೆಟ್​ ಶಾಲೆಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ ಅಂತ ರೂಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದಾರೆ.

ಓದಿ:2ನೇ ನೋಟಿಸ್​ಗೂ ಹಾಜರಾದ Hacker ಶ್ರವಣ್‌ : ನಾಲ್ಕು ಗಂಟೆಗಳ ಕಾಲ SIT ಡ್ರಿಲ್..!

ABOUT THE AUTHOR

...view details