ಕರ್ನಾಟಕ

karnataka

ETV Bharat / state

ಲೆಕ್ಕಪತ್ರ ಸಮಿತಿ‌ಯ ಸ್ಥಳ ಭೇಟಿಗೆ ತಡೆಯಾಜ್ಞೆ ನೀಡಿರುವುದು ಕಾನೂನು ಬಾಹಿರ: ರವಿಕೃಷ್ಣಾ ರೆಡ್ಡಿ - ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆಗೆ ಮುಂದಾದಾಗ, ತಾವು ಈಗ ಅದಕ್ಕೆ ತಡೆಯಾಜ್ಞೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟುಹಾಕುತ್ತಿದೆ. ರಾಜ್ಯ ಸರ್ಕಾರದ ಹಲವು ಖರೀದಿ ವ್ಯವಹಾರಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ವಿಚಾರದಲ್ಲಿ ಈಗ ನಮಗೆ ಯಾವುದೇ ಸಂಶಯ ಉಳಿದಿಲ್ಲ.

It is illegal to stop the visit the Accounting Committee said by Ravi krishna Reddy
ರವಿ ಕೃಷ್ಣಾರೆಡ್ಡಿ

By

Published : May 29, 2020, 3:31 PM IST

ಬೆಂಗಳೂರು:ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲು ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕೆಲಸಕ್ಕೆ ತಡೆಯಾಜ್ಞೆ ನೀಡಿರುವುದು ಸಂಪೂರ್ಣವಾಗಿ ಕಾನೂನು ಬಾಹಿರ‌ ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಸ್ಪೀಕರ್​ಗೆ ಬಹಿರಂಗ ಪತ್ರ ಬರೆದಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ಕೋವಿಡ್-19 ನಿರ್ವಹಣೆಗೆಂದು ರಾಜ್ಯ ಸರ್ಕಾರದ ಕೆಎಸ್‌ಡಿಎಲ್‌ಡಬ್ಲ್ಯೂಎಸ್ (ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್‌ಹೌಸಿಂಗ್ ಸೊಸೈಟಿ) ಸಂಸ್ಥೆಯಿಂದ ಖರೀದಿಸಲ್ಪಟ್ಟ ವೈದ್ಯಕೀಯ ಉಪಕರಣ, ಪರಿಕರ, ಔಷಧಿ ಮತ್ತಿತರ ಖರೀದಿ ವ್ಯವಹಾರದಲ್ಲಿ ಹತ್ತಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ. ಈ ವಿಚಾರವಾಗಿ ಮಾಧ್ಯಮ ವರದಿಗಳು ಮತ್ತಿತರ ಮೂಲಗಳಿಂದ ನಮಗೆ ದೊರಕಿದ ಖಚಿತ ಮಾಹಿತಿಗಳ ಆಧಾರದ ಮೇಲೆ ನಮ್ಮ ಪಕ್ಷ ಸುಮಾರು ಎರಡು ತಿಂಗಳಿನಿಂದ ಧ್ವನಿ ಎತ್ತುತ್ತಾ ಬಂದಿದೆ. ಈ ಬಗ್ಗೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿಯೂ ದೂರು ನೀಡಲಾಗಿದೆ. ಬಳಿಕ ರಾಜ್ಯ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೂ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈಗ ಆ ದೂರಿನ ಆಧಾರದ ಮೇಲೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆಗೆ ಮುಂದಾದಾಗ, ತಾವು ಈಗ ಅದಕ್ಕೆ ತಡೆಯಾಜ್ಞೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟುಹಾಕುತ್ತಿದೆ. ರಾಜ್ಯ ಸರ್ಕಾರದ ಹಲವು ಖರೀದಿ ವ್ಯವಹಾರಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ವಿಚಾರದಲ್ಲಿ ಈಗ ನಮಗೆ ಯಾವುದೇ ಸಂಶಯ ಉಳಿದಿಲ್ಲ. ಆ ಅಕ್ರಮಗಳನ್ನು ಮುಚ್ಚಿ ಹಾಕಲೆಂದೇ ಕೆಲವರು ತಮ್ಮ ಮೇಲೆ ತಂದ ಒತ್ತಡಕ್ಕೆ ತಾವು ಬಗ್ಗಿದ್ದೀರಿ ಅಥವಾ ಆ ಭ್ರಷ್ಟರನ್ನು ರಕ್ಷಿಸಲೆಂದು ಸ್ವತಃ ತಾವೇ ಸ್ವಯಂಪ್ರೇರಿತವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎಂಬ ಸಂಶಯ ಬಂದಿದೆ‌ ಎಂದು ಆರೋಪಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವ ತಾವು ಸತ್ಯ, ನ್ಯಾಯ, ಮತ್ತು ಧರ್ಮದ ಹಾದಿಯಲ್ಲಿ ನಡೆಯಲು ಶಿರಸಿಯ ಮಾರಿಕಾಂಬೆ ತಮಗೆ ಪ್ರೇರಣೆ ನೀಡಲಿ ಎಂದು ಈ ಸಂದರ್ಭದಲ್ಲಿ ಬೇಡುತ್ತೇನೆ. ಮುಂದಿನ ಸಲ ತಾವು ಊರಿಗೆ ಹೋಗಿ ಆ ತಾಯಿಯ ಮುಂದೆ ನಿಂತಾಗ ತಮಗೆ ಯಾವುದೇ ಪಾಪ ಪ್ರಜ್ಞೆ ಕಾಡದಿರಲಿ ಎಂದು ಆಶಿಸುತ್ತೇನೆ. ಹಾಗಾಗಿ ತಾವು ಈ ಕೂಡಲೇ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಿ, ಆಗಿರುವ ಪ್ರಮಾದವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

For All Latest Updates

ABOUT THE AUTHOR

...view details