ಬೆಂಗಳೂರು : ದೆಹಲಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಫ್ಲಾಟ್ ಮೇಲೆ ಐಟಿ ದಾಳಿ ಪ್ರಕರಣ ಸಂಬಂಧದ ಅರ್ಜಿ ವಿಚಾರಣೆ ಇಂದು ನಡೆಯಿತು. ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಸಚಿವ ಡಿಕೆಶಿ ಪರ ವರ ವಕೀಲ ವಾದ ಮಂಡಿಸಿದ್ರು.ಆದಾಯ ತೆರಿಗೆ ದಾಳಿ ಪ್ರಕರಣದಲ್ಲಿ ಕೇವಲ ಆರೋಪಿಗಳ ಹೇಳಿಕೆ ಮೇಲೆ ಪ್ರಕರಣ ದಾಖಲಿಸುವುದು ಸರಿ ಅಲ್ಲ, ಆರೋಪಗಳಲ್ಲಿ ಸತ್ಯಾಸತ್ಯತೆ ಹುಡುಕಬೇಕು, ಇದೊಂದು ಅವಧಿ ಪೂರ್ವ ಕಂಪ್ಲೇಂಟ್ ಎಂದು ವಾದಿಸಿದ್ದಾರೆ.
ದೆಹಲಿಯ ಫ್ಲಾಟ್ ಮೇಲೆ ಐಟಿ ದಾಳಿ ಕೇಸ್; ಕೋರ್ಟ್‌ಗೆ ಹಾಜರಾದ ಡಿಕೆಶಿ - Kannada news
ತೆರಿಗೆದಾರನಿಗೆ ತಮ್ಮ ಆಸ್ತಿಗಳನ್ನು ಘೋಷಿಸಿಕೊಳ್ಳಲು ಐಟಿ ಸಮಯವೇ ನೀಡಿಲ್ಲ. ಆರ್ಥಿಕ ವರ್ಷದ ಮಧ್ಯೆ ಐಟಿ ದಾಳಿ ಮಾಡಿದೆ. ಹಾಗಾಗಿ ಇದು ಅಕ್ರಮ ಆಸ್ತಿ ಅನ್ನೋದು ಸರಿಯಲ್ಲ, ಐಟಿ ಇಲಾಖೆ ದಾಖಲು ಮಾಡಿರುವ ದೂರನ್ನ ಕೈಬಿಡಬೇಕು ಎಂದು ಸಚಿವ ಡಿಕೆ ಶಿವಕುಮಾರ್ ಪರ ವಕೀಲರು ಇಂದು ವಾದ ಮಂಡಿಸಿದ್ದಾರೆ.
ಸಚಿವ ಡಿ.ಕೆ ಶಿವಕುಮಾರ
ಐಟಿ ಇಲಾಖೆ ದಾಖಲು ಮಾಡಿರುವ ದೂರನ್ನ ಕೈಬಿಡಬೇಕು. ತೆರಿಗೆದಾರನಿಗೆ ತಮ್ಮ ಆಸ್ತಿಗಳನ್ನು ಘೋಷಿಸಿಕೊಳ್ಳಲು ಐಟಿ ಸಮಯವೇ ನೀಡಿಲ್ಲ. ಆರ್ಥಿಕ ವರ್ಷದ ಮಧ್ಯೆ ಐಟಿ ದಾಳಿ ಮಾಡಿದೆ. ಹೀಗಾಗಿ ಇದು ಅಕ್ರಮ ಆಸ್ತಿ ಅನ್ನೋದು ಸರಿಯಲ್ಲ ಎಂದು ವಾದ ಮಾಡಿದರು.
ಹೇಳಿಕೆ ಪ್ರತಿ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನ ಜೂನ್ 12ಕ್ಕೆ ಮುಂದೂಡಿದೆ. ವಿಚಾರಣೆ ನಡೆಯುವ ವೇಳೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹಾಗು ಇತರೆ ಆರೋಪಿಗಳಾದ ರಾಜೇಂದ್ರ , ಆಂಜನೇಯ, ಸುನೀಲ್ ಶರ್ಮಾ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.