ಕರ್ನಾಟಕ

karnataka

By

Published : Mar 27, 2021, 3:29 PM IST

ETV Bharat / state

ಐಟಿ ಕಂಪನಿಗಳು ಸರ್ಕಾರಿ ಶಾಲಾಭಿವೃದ್ಧಿಗೆ ಮುಂದಾಗಬೇಕು : ಪ್ರೊ. ಎಂ ಆರ್ ದೊರೆಸ್ವಾಮಿ ಮನವಿ

ಈವರೆಗೆ 3,000 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿದ್ದು, ದತ್ತು ಪಡೆದ ಶಾಲೆಗಳ ಅಭಿವೃದ್ಧಿ ಮೇಲ್ವಿಚಾರಣೆ ಮಾಡಲು ರಾಜ್ಯ ಮಟ್ಟದ ಸಲಹಾ ಸಮಿತಿ ರಚಿಸಲಾಗಿದೆ.‌.

ದೊರೆಸ್ವಾಮಿ ಮನವಿ
ದೊರೆಸ್ವಾಮಿ ಮನವಿ

ಬೆಂಗಳೂರು :ನಗರದ ಐಟಿ ಕಂಪನಿಗಳು ಮನಸ್ಸು ಮಾಡಿ ಸರ್ಕಾರಿ ಶಾಲಾಭಿವೃದ್ಧಿಗೆ ಮುಂದಾಗಬೇಕು ಎಂದು ಸರ್ಕಾರದ ಶಿಕ್ಷಣ‌ ಸುಧಾರಣೆಗಳ ಸಲಹೆಗಾರ ಪ್ರೊ.ಎಂ ಆರ್ ದೊರೆಸ್ವಾಮಿ ಹೇಳಿದರು.

ಸುಮಾರು 24,000 ಐಟಿ ಕಂಪನಿಗಳು ಬೆಂಗಳೂರಿನಲ್ಲಿವೆ. ಅದರಲ್ಲಿ ಕೇವಲ 4,000 ಕಂಪನಿಗಳು ಮನಸ್ಸು ಮಾಡಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಬಡ ಮಕ್ಕಳ ಕಡೆ ಗಮನಹರಿಸಿ, ಸಿಎಸ್​ಆರ್​ ಫಂಡ್ ಇದ್ದು ಅದನ್ನು ಯಾವುದಕ್ಕೋ ಖರ್ಚು ಮಾಡೋ ಬದಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾಡಿ ಎಂದು ಮನವಿ ಮಾಡಿದರು.

ಶಾಲೆಗಳ ದತ್ತು ಸ್ವೀಕಾರದ ಕಾರ್ಯಕ್ರಮದ ಬೆಳವಣಿಗೆ ಕುರಿತು ಮಾತಾನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ಬಡಮಕ್ಕಳೇ ಹೆಚ್ಚು ಬರುತ್ತಾರೆ. ಆದರೆ, ಹಲವೆಡೆ ಸೌಲಭ್ಯ ಇಲ್ಲದ ಕಾರಣಕ್ಕೆ ಮಕ್ಕಳ ಹಾಜರಾತಿ ಕಡಿಮೆ ಆಗ್ತಿದೆ. ಇಂದಿಗೂ ಕನ್ನಡ ಉಳಿದಿರುವುದು ಸರ್ಕಾರಿ ಶಾಲೆಗಳಿಂದ ಹಾಗೂ ಬಡವರಿಂದ, ಇದೇ ವಾಸ್ತವ ಎಂದರು.

ಪಕ್ಕದ ದೆಹಲಿಯಲ್ಲಿ ಶಿಕ್ಷಣಕ್ಕಾಗಿ ಶೇ. 20ರಷ್ಟು ಅನುದಾನ ಬಜೆಟ್​ನಲ್ಲಿ ಮೀಸಲಿಟ್ಟಿದ್ದಾರೆ. ಯಾರ ಬಳಿಯೂ ಅಂಗಲಾಚದೇ ‌ಸರ್ಕಾರಿ ಹಣವನ್ನು ಎಲ್ಲ ಶಾಲೆಗಳಿಗೂ ಬಳಸಿ ಮಾದರಿ ಮಾಡಿದ್ದಾರೆ. ಅಲ್ಲಿ ಖಾಸಗಿ ಶಾಲೆಗಳಿಂದ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಸೇರಿಲಾಗುತ್ತಿದೆ. ಲೀಡರ್​ಶಿಪ್ ಡೆವಲಪ್​ಮೆಂಟ್​ ಮಾಡಿದ್ದು, ನಾವು ಯಾಕೆ ಈ ರೀತಿ ಮಾಡಬಾರದು ಎಂದು ಸರ್ಕಾರಕ್ಕೂ ಮನವಿ ಮಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಸಂಬಂಧ ಶಿಕ್ಷಕರಿಗೆಲ್ಲಾ ತರಬೇತಿ ನೀಡಬೇಕು. ಬುಕ್ಲೇಟ್ ಮಾಡಿ ನೀಡೋದರಿಂದ ಯಾವುದೇ ಪ್ರಯೋಜನವಿಲ್ಲ. ಶಿಕ್ಷಕರು ಈಗೀಗ ಪುಸ್ತಕವನ್ನು‌ ಓದುವುದೇ ಕಡಿಮೆ ಮಾಡಿದ್ದಾರೆ. ಹೀಗಾಗಿ, ಇದಕ್ಕಾಗಿ ಸೂಕ್ತ ತರಬೇತಿ ನೀಡಬೇಕು ಎಂದರು. ಇದೇ ವೇಳೆ ರಾಜ್ಯದ ಎಲ್ಲಾ ಶಿಕ್ಷಕರನ್ನು ಕೊರೊನಾ ವಾರಿಯರ್ಸ್‌ ಎಂದು ಘೋಷಿಸಿ ವ್ಯಾಕ್ಸಿನೇಷನ್‌ ನೀಡಬೇಕೆಂದು ಸರ್ಕಾರಕ್ಕೆ‌ ಮನವಿ ಮಾಡಿರೋದಾಗಿ ಹೇಳಿದ್ರು.

ಇನ್ಫೋಸಿಸ್​ನ‌ ಸುಧಾಮೂರ್ತಿಯವರಿಗೆ ಪತ್ರ ಬರೆದಿದ್ದು, ಅವರ ಹುಟ್ಟೂರು ಹುಬ್ಬಳ್ಳಿ-ಧಾರವಾಡದ ಶಾಲೆಗಳನ್ನು ದತ್ತು ಪಡೆಯುವಂತೆ ಮನವಿ ಮಾಡಲಾಗಿತ್ತು. ಆದರೆ, ಅವರು ಡಿಜಿಟಲೈಸ್ ಸಹಾಯ( ಕಂಪ್ಯೂಟರ್ ಒದಗಿಸುವಂತೆ) ಮಾಡುವುದಾಗಿ ತಿಳಿಸಿದ್ದಾರೆ.‌ ಈಗಾಗಲೇ ಅಲ್ಲಿರುವ ಶಾಲೆಗಳ ಪಟ್ಟಿ ಮಾಡಿ ಕಳುಹಿಸಿ ಕೊಡಲಾಗಿದೆ ಎಂದರು.

ಈವರೆಗೆ 3,000 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿದ್ದು, ದತ್ತು ಪಡೆದ ಶಾಲೆಗಳ ಅಭಿವೃದ್ಧಿ ಮೇಲ್ವಿಚಾರಣೆ ಮಾಡಲು ರಾಜ್ಯ ಮಟ್ಟದ ಸಲಹಾ ಸಮಿತಿ ರಚಿಸಲಾಗಿದೆ.‌

ಅದರಲ್ಲಿ ಎಂಎಲ್​ಸಿ ಹೆಚ್ ವಿಶ್ವನಾಥ್, ಡಾ. ಕೆ ಸಿದ್ದಪ್ಪ, ಮಾಜಿ ವಿಸಿ, ಬೆಂಗಳೂರು ವಿಶ್ವವಿದ್ಯಾಲಯ ಡಾ.ಜೆ ಸೂರ್ಯ ಪ್ರಸಾದ್, ವಿಸಿ, ಪಿಇಎಸ್‌ಯು ಎಂ. ಮದನಗೋಪಾಲ್, ಮಾಜಿ ಎಸಿಎಸ್, ಗೋಕೆ ಗೋಪಾಲ್ ಹೊಸೂರು, ಮಾಜಿ ಐಜಿ ಪೊಲೀಸ್, ಮಕ್ಕಳ ವೈದ್ಯೆ‌ ಡಾ.ವಿಜಯಲಕ್ಷ್ಮಿ ಬಾಲೆಕುಂದ್ರಿ, ಸಾಫ್ಟ್‌ವೇರ್ ಉದ್ಯಮಿ ಕರಣ ಕುಮಾರ್ ಹಾಗೂ ಸಾಮಾಜಿಕ ಸೇವೆಯಲ್ಲಿ ತೇಜಸ್ವಿನಿ ಅನಂತಕುಮಾರ್​ರನ್ನು ನೇಮಿಸಲಾಗಿದೆ.

ಇದನ್ನೂ ಓದಿ..ಹೊಲದಲ್ಲಿ ಮಲಗಿದ್ದ ಯುವಕನನ್ನು ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ ದುಷ್ಕರ್ಮಿಗಳು!

ABOUT THE AUTHOR

...view details