ಕರ್ನಾಟಕ

karnataka

ETV Bharat / state

ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ.. 20ಕ್ಕೂ ಹೆಚ್ಚು ಅಧಿಕಾರಿಗಳಿಂದ ಮುಂದುವರೆದ ಶೋಧ..

ಖೋಡೇಸ್ ಬ್ರಿವರೇಜಸ್, ಖೋಡೆ ಆರ್‌ಸಿಎ, ಖೋಡೆ ಇಂಡಿಯಾ ಫ್ಯಾಕ್ಟರಿಗಳ ಮೇಲೆ ಐಟಿ ದಾಳಿ ಮುಂದುವರೆದಿದೆ. ರಾಮಚಂದ್ರ ಖೋಡೆ, ಹರಿ ಖೋಡೆ ಸಹೋದರರ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸುತ್ತಿದ್ದಾರೆ..

it-attack-case-against-khodase-group-search-case
ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ ಪ್ರಕರಣ

By

Published : Feb 9, 2021, 9:12 PM IST

ಬೆಂಗಳೂರು :ನಗರದಲ್ಲಿ ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ ನಡೆದಿದೆ. ಬೆಳಗ್ಗೆಯಿಂದ ಲಿಕ್ಕರ್ ಮಾಲೀಕರ ಮನೆ, ಫ್ಯಾಕ್ಟರಿ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಸತತ 12 ಗಂಟೆಗಳ ಕಾಲ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಓದಿ: ವಿಮಾನದ ಮೂಲಕ ಸಾಗಿಸಲು ಸಜ್ಜಾಗಿದ್ದ 5.1 ಕೋಟಿ ರೂ. ಮೌಲ್ಯದ ಗಾಂಜಾ-ಡ್ರಗ್ಸ್​​ ವಶ!

ದಾಳಿ ವೇಳೆ ಹಲವು ದಾಖಲೆ ಪತ್ರಗಳು ಹಾಗೂ ಕಡತಗಳು ಪತ್ತೆಯಾಗಿವೆ. ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರೆಯುವ ಸಾಧ್ಯತೆ ಇದೆ. ಮೆಜೆಸ್ಟಿಕ್​​ನ ಮನೆ ಕಮ್‌ ಆಫೀಸ್, ಕೋಣನಕುಂಟೆಯ ಫ್ಯಾಕ್ಟರಿ ಸೇರಿದಂತೆ ಇಡೀ ಖೋಡೇಸ್ ಗ್ರೂಪ್‌ಗೆ ಸೇರಿದ 15ಕ್ಕೂ ಹೆಚ್ಚು ಕಡೆಗೆ ಐಟಿ ದಾಳಿ ನಡೆದಿದೆ.

ಖೋಡೇಸ್ ಬ್ರಿವರೇಜಸ್, ಖೋಡೆ ಆರ್‌ಸಿಎ, ಖೋಡೆ ಇಂಡಿಯಾ ಫ್ಯಾಕ್ಟರಿಗಳ ಮೇಲೆ ಐಟಿ ದಾಳಿ ಮುಂದುವರೆದಿದೆ. ರಾಮಚಂದ್ರ ಖೋಡೆ, ಹರಿ ಖೋಡೆ ಸಹೋದರರ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸುತ್ತಿದ್ದಾರೆ.

ಆನಂದ ರಾವ್ ಸರ್ಕಲ್‌ನಲ್ಲಿರುವ ಶೇಷಾದ್ರಿ ರಸ್ತೆಯ ಎರಡು ಮನೆಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ ಆರಂಭಿಸಲಾಗಿತ್ತು. ಶೇಷಾದ್ರಿ ರಸ್ತೆಯಲ್ಲಿರುವ ಖೋಡೇಸ್ ಸಹೋದರರ ಎರಡು ಮನೆಗಳಿದ್ದು, ಒಟ್ಟು 15 ಕಡೆಗಳಲ್ಲಿ ದಾಖಲಾತಿಗಳ ಪರಿಶೀಲನೆ ನಡೆದಿದೆ.

ABOUT THE AUTHOR

...view details