ಬೆಂಗಳೂರು: ಇಸ್ರೋ ಸಂಸ್ಥೆಯ ಸ್ವಂತ ಸೌರಕೋಶ ತಯಾರಿಕಾ ಘಟಕವನ್ನು ಬಾಟವಾಡಿ ಬಳಿ ನಿರ್ಮಿಸುತ್ತಿದೆ. ಈಗಾಗಲೇ ಯೋಜನೆ ಪೂರ್ಣವಾಗಿದ್ದು ಈ ವರ್ಷದಲ್ಲಿ ಘಟಕದ ನಿರ್ಮಾಣ ಪ್ರಾರಂಭವಾಗಲಿದೆ.
ತುಮಕೂರಿನಲ್ಲಿ ನಿರ್ಮಾಣವಾಗಲಿದೆ ಇಸ್ರೋ ಸ್ವಂತ ಸೌರ ಕೋಶ ತಯಾರಕಾ ಘಟಕ - ISRO's own solar cell
ಇಸ್ರೋ ಸಂಸ್ಥೆಯ ಸ್ವಂತ ಸೌರಕೋಶ ತಯಾರಿಕಾ ಘಟಕವನ್ನು ತುಮಕೂರಿನ ಬಾಟವಾಡಿ ಬಳಿ ನಿರ್ಮಿಸುತ್ತಿದೆ.
ತುಮಕೂರಿನಲ್ಲಿ ನಿರ್ಮಾಣವಾಗಲಿದೆ ಇಸ್ರೋ ಸ್ವಂತ ಸೌರ ಕೋಶ ತಯಾರಕಾ ಘಟಕ
ಸೌರಕೋಶ ತಯಾರಿಕಾ ಘಟಕ 30 ಎಕರೆ ಜಮೀನಿನಲ್ಲಿ ನಿರ್ಮಾಣವಾಗಲಿದೆ. 2018ರಲ್ಲಿ ಎಚ್ಎಂಟಿ ಗಡಿಯಾರ ಸಂಸ್ಥೆ 120 ಎಕರೆ ಜಾಗವನ್ನು ಇಸ್ರೋ ತನ್ನ ಸ್ವಾಧೀನಕ್ಕೆ ಪಡೆದಿತ್ತು. ವಿದೇಶಿ ಮೂಲದ ಒಂದು ಸಂಸ್ಥೆ ಬ್ಲೂ ಪ್ರಿಂಟ್ ರಚಿಸಿ ನಂತರ ಇಸ್ರೋ ನಿರ್ಮಾಣ ಕಾರ್ಯಕ್ಕೆ ಮುಂದಾಗಲಿದೆ.
ಉಪಗ್ರಹಗಳಿಗೆ ಸೌರ ಶಕ್ತಿ ಅತ್ಯಗತ್ಯ, ಪ್ರಸ್ತುತವಾಗಿ ಉಪಗ್ರಹಕ್ಕೆ ಬಳಸುವ ಸೌರಕೋಶಗಳನ್ನು ಹೊರಗುತ್ತಿಗೆ ಇಸ್ರೋ ನೀಡುತ್ತಿತ್ತು. ಆದರೆ ಘಟಕ ತನ್ನ ಕಾರ್ಯನಿರ್ವಹಣೆ ಪ್ರಾರಂಭದ ನಂತರ ಸ್ವಂತ ಸೌರ ಕೋಶಗಳನ್ನು ಉಪಗ್ರಹಕ್ಕೆ ಅಳವಡಿಸಲಾಗುವುದು.