ಕರ್ನಾಟಕ

karnataka

ETV Bharat / state

ಭಾರತೀಯರ ಕನಸು, ಭರವಸೆಯನ್ನು ಹೊತ್ತೊಯ್ಯುವ ಕಾರ್ಯ ಮುಂದುವರೆಯಲಿದೆ: ಇಸ್ರೋ - ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಆರಂಭದಲ್ಲಿ ಚಂದ್ರನ ಮೇಲ್ಮೈ ಸ್ಪರ್ಶಕ್ಕೂ 2.1ಕಿ.ಮೀ ಬಾಕಿ ಇರುವ ವೇಳೆ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತವಾಗಿದೆ ಎಂದು ಇಸ್ರೋ ಹೇಳಿತ್ತು. ಆದರೆ ಕೆಲ ದಿನಗಳ ಹಿಂದೆ ತಿಳಿದು ಬಂದ ಮಾಹಿತಿ ಪ್ರಕಾರ ಕೇವಲ 400 ಮೀ. ಅಂತರ ಬಾಕಿ ಇದ್ದಾಗ ಸಂಪರ್ಕ ಕಡಿತವಾಗಿದೆ.

ಇಸ್ರೋ

By

Published : Sep 18, 2019, 2:37 AM IST

ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಕೊನೇ ಕ್ಷಣದಲ್ಲಿ ಕೊಂಚ ಹಿನ್ನಡೆಯಾಗಿರುವುದು ಕೋಟ್ಯಂತರ ಭಾರತೀಯರಿಗೆ ನಿರಾಸೆಯಾಗಿದ್ದರೂ ಹೆಮ್ಮೆಯ ವಿಜ್ಞಾನಿಗಳ ಕಠಿಣ ಪ್ರಯತ್ನಕ್ಕೆ ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರಿ ಬೆಂಬಲ ವ್ಯಕ್ತವಾಗಿತ್ತು.

ನಿಮ್ಮ ಯೋಜನೆ ನಿಜಕ್ಕೂ ಕಠಿಣ, ಈ ಪ್ರಯತ್ನ ನಮಗೂ ಪ್ರೇರಣೆ: ವಿವಿಧ ಸ್ಪೇಸ್​​ ಸಂಸ್ಥೆಗಳಿಂದ ಇಸ್ರೋ ಗುಣಗಾನ

ಸದ್ಯ ವಿಜ್ಞಾನಿಗಳ ತಂಡವನ್ನು ಬೆಂಬಲಿಸಿರುವುದಕ್ಕೆ ಇಸ್ರೋ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದೆ. ನಮ್ಮ ಜೊತೆ ನಿಂತಿರುವುದಕ್ಕೆ ಧನ್ಯವಾದ. ನಿಮ್ಮ ಪ್ರೋತ್ಸಾಹದಿಂದ ನಾವು ಮುನ್ನಡೆಯುತ್ತೇವೆ. ಭಾರತೀಯರ ಕನಸು ಹಾಗೂ ಭರವಸೆಯನ್ನು ವಿಶ್ವಕ್ಕೇ ತಿಳಿಸುವ ಕಾರ್ಯ ಮುಂದುವರೆಯಲಿದೆ ಎಂದು ಟ್ವೀಟ್ ಮಾಡಿದೆ.

ಜುಲೈ 22ರಂದು ನಭಕ್ಕೆ ಜಿಗಿದಿದ್ದ ಚಂದ್ರಯಾನ 2 ರಾಕೆಟ್ ಸೆಪ್ಟೆಂಬರ್ 7ರ ನಸುಕಿನ ಜಾವ 1.30ರಿಂದ 2 ಗಂಟೆ ವೇಳೆ ಚಂದ್ರನ ಮೇಲ್ಮೈ ಸ್ಪರ್ಶಿಸುವ ಕಾರ್ಯ ಪ್ರಕ್ರಿಯೆ ನಡೆದಿತ್ತು. ಚಂದ್ರನ ಮೇಲ್ಮೈ ಸ್ಪರ್ಶ 400ಮೀ. ಬಾಕಿ ಇರುವಂತೆ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತವಾಗಿತ್ತು. ಸಂಪರ್ಕ ಮರುಸ್ಥಾಪಿಸಲು ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಿದ್ದು, ಇನ್ನೂ ಸಾಧ್ಯವಾಗಿಲ್ಲ.

ವಿಶ್ವ ವಾಣಿಜ್ಯ ಕಟ್ಟಡದ ಎತ್ತರದಷ್ಟು ದೂರದಲ್ಲಿದ್ದಾಗ ವಿಕ್ರಂ ಸಂಪರ್ಕ ಕಳೆದುಕೊಂಡಿತು!

ಆರಂಭದಲ್ಲಿ ಚಂದ್ರನ ಮೇಲ್ಮೈ ಸ್ಪರ್ಶಕ್ಕೂ 2.1ಕಿ.ಮೀ ಬಾಕಿ ಇರುವ ವೇಳೆ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತವಾಗಿದೆ ಎಂದು ಇಸ್ರೋ ಹೇಳಿತ್ತು. ಆದರೆ ಕೆಲ ದಿನಗಳ ಹಿಂದೆ ತಿಳಿದು ಬಂದ ಮಾಹಿತಿ ಪ್ರಕಾರ ಕೇವಲ 400 ಮೀ. ಅಂತರ ಬಾಕಿ ಇದ್ದಾಗ ಸಂಪರ್ಕ ಕಡಿತವಾಗಿದೆ.

ವಿಕ್ರಮ್ ಲ್ಯಾಂಡರ್ ಕಾರ್ಯಾವಧಿ ಚಂದ್ರನ ಒಂದು ದಿನ ಎಂದರೆ ಭೂಮಿಯ 14 ದಿನಗಳಿದ್ದು ಇನ್ನು ಮೂರು ದಿನದಲ್ಲಿ ಸಂಪರ್ಕ ಸಾಧ್ಯವಾದಲ್ಲಿ ಚಂದ್ರಯಾನ 2 ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆಯಿದೆ. ಜುಲೈ 22ರ ಬಳಿಕ ಚಂದ್ರನ ದಕ್ಷಿಣ ಧ್ರುವದಲ್ಲಿ ರಾತ್ರಿ ಆವರಿಸಲಿದ್ದು, ಸೂರ್ಯನ ಬೆಳಕು ಲ್ಯಾಂಡರ್​​ ಸ್ಪರ್ಶಿಸುವುದಿಲ್ಲ. ಪರಿಣಾಮ ಲ್ಯಾಂಡರ್ ಸಂಪರ್ಕ ಶಾಶ್ವತವಾಗಿ ಕೊನೆಯಾಗಲಿದೆ.

ABOUT THE AUTHOR

...view details