ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಮಾನವ ಸಹಿತ ಗಗನಯಾನ ಕಾರ್ಯಕ್ರಮದಲ್ಲಿ ಇಸ್ರೋ ಬುಧವಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಾನವ ಸಹಿತ ಗಗನಯಾನ ಯೋಜನೆಗೆ ಪ್ರಮುಖ ಅಡಿಗಲ್ಲಾದ ಕ್ರಯೋಜನಿಕ್ ಎಂಜಿನ್ ಅರ್ಹತಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದು ತಿಳಿಸಿದೆ.
ಇಸ್ರೋದಿಂದ ಗಗನಯಾನದ ಕ್ರಯೋಜನಿಕ್ ಎಂಜಿನ್ ಅರ್ಹತಾ ಪರೀಕ್ಷೆ ಯಶಸ್ವಿ - ಗಗನಯಾನದ ಕ್ರಯೋಜನಿಕ್ ಎಂಜಿನ್ ಯಶಸ್ವೀ ಪರೀಕ್ಷೆ
ಮಾನವ ಸಹಿತ ಗಗನಯಾನ ಯೋಜನೆಯಲ್ಲಿ ಜನವರಿ 12 ರಂದು ನಡೆದ ದೀರ್ಘಕಾಲೀನ ಪರೀಕ್ಷೆಯು ಪ್ರಮುಖವಾಗಿದ್ದು, ಗಗನಯಾನ ಯೋಜನೆಯಲ್ಲಿ ಕ್ರಯೋಜನಿಕ್ ಎಂಜಿನ್ ಬಳಕೆ ಮೇಲಿನ ಅವಲಂಬನೆ ಹಾಗೂ ದೃಢತೆ ಬಗ್ಗೆ ಖಚಿತಪಡಿಸಿದೆ.
ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಫ್ರೋಪಲ್ಕನ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 720 ಸೆಕೆಂಡ್ (12 ನಿಮಿಷ) ಗಳ ಕಾಲ ನಡೆದ ಎಂಜಿನ್ ಸಾಮರ್ಥ್ಯ ಪರೀಕ್ಷೆಯಲ್ಲಿ ಕ್ರಯೋಜನಿಕ್ ಎಂಜಿನ್ ಪರೀಕ್ಷೆಗೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿದೆ ಎಂದು ಇಸ್ರೋ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಮಾನವ ಸಹಿತ ಗಗನಯಾನ ಯೋಜನೆಯಲ್ಲಿ ಜನವರಿ 12 ರಂದು ನಡೆದ ದೀರ್ಘಕಾಲೀನ ಪರೀಕ್ಷೆಯು ಪ್ರಮುಖವಾಗಿದ್ದು, ಗಗನಯಾನ ಯೋಜನೆಯಲ್ಲಿ ಕ್ರಯೋಜನಿಕ್ ಎಂಜಿನ್ ಬಳಕೆ ಮೇಲಿನ ಅವಲಂಬನೆ ಹಾಗೂ ದೃಢತೆ ಬಗ್ಗೆ ಖಚಿತಪಡಿಸಿದೆ. ಕ್ರಯೋಜನಿಕ್ ಎಂಜಿನ್ ಇದೊಂದೇ ಪರೀಕ್ಷೆಯಲ್ಲದೆ ಇನ್ನೂ 4 ಪರೀಕ್ಷೆಗೆ ಒಳಪಡಲಿದ್ದು, ಒಟ್ಟಾರೆ 1,810 ಸೆಕೆಂಡ್ (30 ನಿಮಿಷ) ತೀವ್ರ ರೀತಿಯ ಪರೀಕ್ಷೆಗೆ ಒಳಪಡಲಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.