ಆನೇಕಲ್ (ಬೆಂಗಳೂರು) : ಸೂರ್ಯನ ಆಕರ್ಷಣೆ ಮತ್ತು ಇಳೆಯ ಗುರುತ್ವಾಕರ್ಷಣೆ ಸಂಧಿಸುವ ಲೆಗ್ರೇಂಜ್ -1 ಸ್ಥಳ ಭುವಿಯಿಂದ 15 ಲಕ್ಷ ಕಿ.ಮೀ ಅಂತರದಲ್ಲಿದೆ. ಸತತ ನಾಲ್ಕು ತಿಂಗಳ ದೀರ್ಘ ಪಯಣದಲ್ಲಿ ಆದಿತ್ಯ-L1 ಸಂಚರಿಸಿ, ಅಲ್ಲಿಂದಲೇ ಸೂರ್ಯನ ಅಧ್ಯಯನ ನಡೆಸಲಿದೆ. ಸೂರ್ಯನ ಬಗ್ಗೆ ಗೊತ್ತಿಲ್ಲದ ವಿಚಾರಗಳ ಕುರಿತು ನೌಕೆ ಅಧ್ಯಯನ ಮಾಡಲಿದೆ ಎಂದು ಇಸ್ರೋ ವಿಜ್ಞಾನಿ ಹೆಚ್.ಎನ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಹೀಟ್ ಪೈಪ್ ಎಂಬುದು ಉಪಗ್ರಹದಲ್ಲಿರುವ ಅತಿಮುಖ್ಯವಾದ ಅಂಗ. ಈ ಹೀಟ್ ಪೈಪ್ ಅನ್ನು ಭಾರತ ದೇಶದಲ್ಲೇ ತಯಾರು ಮಾಡುವುದು ನಮ್ಮ ಬಹುದಿನದ ಕನಸು. ಅಜ್ರಿ ಸಂಸ್ಥೆಯವರು ನಮಗೆ ಹೀಟ್ ಪೈಪ್ ರವಾನೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ನಮ್ಮ ಇಂಜಿನಿಯರ್ಗಳು ಸರ್ಟಿಪೈಯ್ಡ್ ಮಾಡಿರುವ 20 ಹೀಟ್ಪೈಪ್ಗಳನ್ನು ತಯಾರಿಸಿದ್ದಾರೆ. ಅದು ಸಂಪೂರ್ಣ ಗುಣಮಟ್ಟದ ಖಾತ್ರಿ ಮಾಡಿಸಿಕೊಂಡಿದೆ. ಆ ಪೈಪ್ಗಳನ್ನು ಮೊದಲ ಬಾರಿಗೆ ನಮ್ಮ ಸಂಸ್ಥೆಗೆ ರವಾನಿಸುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಭಾಗಿಯಾಗಬೇಕೆಂದು ನಮ್ಮನ್ನು ಕೇಳಿಕೊಂಡಿದ್ದರು ಎಂದರು.
ಹೀಟ್ ಪೈಪ್ ಸ್ಯಾಟಲೈಟ್ಗೆ ಮುಖ್ಯವಾಗಿ ಬೇಕಿರುವ ಉಪಕರಣ. ಅಜ್ರಿ ಸಂಸ್ಥೆಯವರು ಮುಂದೆ ಯೂರೋಪ್, ಅಮೆರಿಕ ಎಲ್ಲಿ ಬೇಕಾದ್ರೂ ಸೇಲ್ ಮಾಡಲಿ ಎಂದು ಆಶಿಸುತ್ತೇನೆ. ಇದೀಗ ಚಂದ್ರಯಾನ ಲ್ಯಾಂಡರ್ ತನ್ನಲ್ಲಿನ ಅಧ್ಯಯನ ವಾಹನವನ್ನು ಚಂದ್ರನ ಮೇಲಿರಿಸಿ ಯಶಸ್ವಿಯಾಗಿದೆ. ಮಂಗಳಯಾನ-2ಕ್ಕೆ ಸಿದ್ದತೆ ನಡೆಸುತ್ತಿದ್ದೇವೆ ಎಂದು ಇಸ್ರೋ ನಿರ್ದೇಶಕ ಶಂಕರ್ ಮಾಹಿತಿ ನೀಡಿದರು. ಜಿಗಣಿಯ 'ಅಜ್ರಿ' ಸಂಸ್ಥೆಯಿಂದ ಇಸ್ರೋ ಸಾಧಕರಿಗೆ ಸನ್ಮಾನ ನಡೆಯಿತು.
ಇದನ್ನೂ ಓದಿ:ಆ. 23 ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ... ವಿಕ್ರಮ ಇಳಿದ ತಾಣವನ್ನ’ಶಿವಶಕ್ತಿ’ ಪಾಯಿಂಟ್ ಎಂದು ಕರೆದ ಮೋದಿ!