ಬೆಂಗಳೂರು :ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 300 ಮೀಟರ್ ದೂರದ ಮುಕ್ತ-ಬಾಹ್ಯಾಕಾಶ ಕ್ವಾಂಟಮ್ ಸಂವಹನವನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಎರಡು ಕಟ್ಟಡಗಳ ನಡುವೆ ಸ್ಯಾಟಲೈಟ್ ಆಧಾರಿತ ಸಂವಹನ ನಡೆಸುವ ಉದ್ದೇಶದಲ್ಲಿ ಇಸ್ರೋ ಯಶಸ್ವಿಯಾಗಿದೆ.
ಈ ತಂತ್ರಜ್ಞಾನವನ್ನು ಸ್ಥಳೀಯವಾಗಿಯೇ ರಚಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಟ್ರಾನ್ಸ್ಮೀಟರ್ ಹಾಗೂ ರಿಸಿವರ್ ನಡುವಿನ ಸಂಪರ್ಕಕ್ಕಾಗಿ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ನಾವಿಕ್ ರಿಸಿವರ್ ಬಳಸಲಾಗಿದೆ.
ಕ್ವಾಂಟಮ್ ತಂತ್ರಜ್ಞಾನ ಬಳಸಿ ಸುರಕ್ಷಿತವಾದ ಉಪಗ್ರಹ ಸಂವಹನ ವಲಯದಲ್ಲಿ ಈ ಪರೀಕ್ಷೆ ಪ್ರಮುಖ ಮೈಲಿಗಲ್ಲಾಗಿದೆ. ಈ ತಂತ್ರಜ್ಞಾನವನ್ನು ಮಹತ್ವದ ಸೇನಾ ಮತ್ತು ವಾಣಿಜ್ಯ ಕಾರ್ಯಾಚರಣೆಗಾಗಿ ಭವಿಷ್ಯದಲ್ಲಿ ಬಳಸಿಕೊಳ್ಳಬಹುದಾಗಿದೆ.
ಡೇಟಾ-ಎನ್‌ಕ್ರಿಪ್ಶನ್‌ಗಾಗಿ ಬಳಸುವ ಸಾಂಪ್ರದಾಯಿಕ ಕ್ರಿಪ್ಟೋಸಿಸ್ಟಮ್‌ಗಳು ಗಣಿತ ಸಂಕೀರ್ಣತೆ ಅವಲಂಬಿಸಿವೆ. ಆದರೆ, ಕ್ವಾಂಟಮ್ ಸಂವಹನ ನೀಡುವ ಸುರಕ್ಷತೆಯು ಭೌತಶಾಸ್ತ್ರದ ನಿಯಮಗಳನ್ನು ಆಧರಿಸಿದೆ.
ಆದ್ದರಿಂದ ಕ್ವಾಂಟಮ್ ಕ್ರಿಪ್ಟೋಗ್ರಫಿಯನ್ನು ‘ಫ್ಯೂಚರ್-ಪ್ರೂಫ್’ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ, ಕಂಪ್ಯೂಟೇಶನಲ್ ಹ್ಯಾಕರ್ನಿಂದಲೂ ಭವಿಷ್ಯದಲ್ಲಿ ಕ್ವಾಂಟಮ್-ಕ್ರಿಪ್ಟೋಸಿಸ್ಟಮ್‌ನ ಬೇಧಿಸಲು ಸಾಧ್ಯವಿಲ್ಲ.