ಕರ್ನಾಟಕ

karnataka

ETV Bharat / state

ಇಸ್ರೋದಿಂದ ಗುಡ್ ನ್ಯೂಸ್! ವಿಕ್ರಮ್ ಲ್ಯಾಂಡರ್ ಪತ್ತೆ!

ಶನಿವಾರ ನಸುಕಿನ ಜಾವ ಎರಡು ಗಂಟೆ ವೇಳೆ ಸಂಪರ್ಕ ಕಡಿತಗೊಂಡಿದ್ದ ವಿಕ್ರಮ್ ಲ್ಯಾಂಡರ್ ಇರುವ ಸ್ಥಳವನ್ನು ಇಸ್ರೋ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ಸುದ್ದಿಯನ್ನು ಸ್ವತಃ ಇಸ್ರೋ ಮುಖ್ಯಸ್ಥ ಕೆ.ಸಿವನ್ ಸ್ಪಷ್ಟಪಡಿಸಿದ್ದಾರೆ.

ವಿಕ್ರಮ್ ಲ್ಯಾಂಡರ್

By

Published : Sep 8, 2019, 2:00 PM IST

ಬೆಂಗಳೂರು:ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಲ್ಯಾಂಡಿಂಗ್​ನ ಕೊನೇ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡು ವಿಜ್ಞಾನಿಗಳು ಸೇರಿದಂತೆ ಕೋಟ್ಯಂತರ ಭಾರತೀಯರಿಗೆ ನಿರಾಸೆ ಮೂಡಿಸಿತ್ತು. ಆದರೆ ಸದ್ಯ ಇಸ್ರೋ ಮುಖ್ಯಸ್ಥ ಸಿಹಿಸುದ್ದಿಯೊಂದನ್ನು ಹೇಳಿದ್ದಾರೆ.

ಶನಿವಾರ ನಸುಕಿನ ಜಾವ ಎರಡು ಗಂಟೆ ವೇಳೆ ಸಂಪರ್ಕ ಕಡಿತಗೊಂಡಿದ್ದ ವಿಕ್ರಮ್ ಲ್ಯಾಂಡರ್ ಇರುವ ಸ್ಥಳವನ್ನು ಇಸ್ರೋ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್‌, ಲ್ಯಾಂಡರ್‌ನ ಥರ್ಮಲ್‌ ಇಮೇಜ್‌ ತೆಗೆದು ಕಳುಹಿಸಿದೆ. ಈ ಸುದ್ದಿಯನ್ನು ಸ್ವತಃ ಇಸ್ರೋ ಮುಖ್ಯಸ್ಥ ಕೆ.ಸಿವನ್ ಸ್ಪಷ್ಟಪಡಿಸಿದ್ದಾರೆ.

ಆದರೆ ಲ್ಯಾಂಡರ್ ಜೊತೆಗೆ ಇನ್ನೂ ಸಂಪರ್ಕ ಸಾಧ್ಯವಾಗಿಲ್ಲ. ಸಂಪರ್ಕ ಸಾಧಿಸಲು ಸತತ ಪ್ರಯತ್ನ ಪಡುತ್ತಿರುವುದಾಗಿ ಕೆ.ಸಿವನ್ ಮಾಹಿತಿ ನೀಡಿದ್ದಾರೆ. ಸಂಪರ್ಕ ಸಾಧಿಸುವ ವಿಶ್ವಾಸವನ್ನು ಸಿವನ್ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details