ಬೆಂಗಳೂರು: ಪ್ರಧಾನಮಂತ್ರಿಗಳ ಇನ್ನೋವೇಟಿವ್ ಕಲಿಕಾ ಕಾರ್ಯಕ್ರಮವಾದ "ಧ್ರುವ" ಯೋಜನೆಗೆ ಇಂದು ಚಾಲನೆ ನೀಡಲಾಯಿತು.
ಇಸ್ರೋ ಕಚೇರಿಯಲ್ಲಿ 'ಧ್ರುವ' ಯೋಜನೆಗೆ ಚಾಲನೆ - "ಧ್ರುವ" ಯೋಜನೆ
ಪ್ರಧಾನಮಂತ್ರಿಗಳ ಇನ್ನೋವೇಟಿವ್ ಕಲಿಕಾ ಕಾರ್ಯಕ್ರಮವಾದ "ಧ್ರುವ" ಯೋಜನೆಗೆ ಬೆಂಗಳೂರಿನಲ್ಲಿ ಇಂದು ಚಾಲನೆ ನೀಡಲಾಯಿತು.
ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಮಾನವ ಕೇಂದ್ರ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ರಮೇಶ್ ಪೋಕ್ರಿಯಾಲ್ ಚಾಲನೆ ನೀಡಿದರು. ದೇಶದ ವಿವಿಧ ಭಾಗದ 60 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಕಲಿಯುವ ಅವಕಾಶ ದೊರೆಯಲಿದೆ. ಮೊದಲ ಹಂತದಲ್ಲಿ 60 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು 14 ದಿನಗಳ ಕಾಲ ಧ್ರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ. ವಿಜ್ಞಾನ, ತಂತ್ರಜ್ಞಾನ, ಪ್ರದರ್ಶನ ಕಲೆಯ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ತಿಳಿಸಿದರು.
ಇಸ್ರೋ ಅಧ್ಯಕ್ಷರಾದ ಕೆ.ಸಿವನ್ ಮಾತನಾಡಿ, ಈ ಕಾರ್ಯಕ್ರಮ ಕೇವಲ ವಿಜ್ಞಾನದ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಕಲೆಯ ಪ್ರದರ್ಶನ ವಿದ್ಯಾರ್ಥಿಗಳಿಗೂ ರೂಪಿಸಲಾಗಿದೆ. ಈ ಕಾರ್ಯಕ್ರಮ ಬಾಹ್ಯಾಕಾಶದ ವಿಚಾರಕ್ಕೂ ಸಂಬಂಧಿಸಿದ್ದಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ದೇಶದ ವಿವಿಧ ಭಾಗದ ಜನರು ಅನುಭವಿಸುವ ಕಷ್ಟ-ತೊಂದರೆಗಳ ಅನುಭವವಾಗಲಿದೆ ಎಂದರು.