ಕರ್ನಾಟಕ

karnataka

By

Published : Mar 2, 2022, 6:05 PM IST

ETV Bharat / state

ವರ್ಕ್ ಫ್ರಮ್ ಹೋಂನಿಂದಾಗಿ ಐಟಿ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ನಿದ್ರಾಹೀನತೆ

ಮೊದಮೊದಲು ವರ್ಕ್ ಫ್ರಮ್ ಹೋಂ ಅನ್ನು ಖುಷಿಯಿಂದ ಸ್ವೀಕರಿಸುತ್ತಿದ್ದ ಉದ್ಯೋಗಿಗಳು ಈಗ ಸಾಕಪ್ಪ ಈ ಸಹವಾಸ, ಆಫೀಸ್ ಯಾವಾಗ ಓಪನ್ ಆಗುತ್ತದೋ? ಎನ್ನುವಂತಾಗಿದೆ.

Dr. Shraddha Shejaker
ಡಾ. ಶ್ರದ್ಧಾ ಶೆಜೆಕರ್

ಜಗತ್ತಿನಾದ್ಯಂತ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದ ಪರಿಣಾಮ ಜನ ಸಮುದಾಯ ಒಂದೆಡೆ ಸೇರುವುದನ್ನು ಸರ್ಕಾರ ನಿರ್ಬಂಧಿಸಿತ್ತು. ಇದರಿಂದಾಗಿ ದೇಶದಲ್ಲಿ ಉದ್ಯೋಗಿಗಳ ವರ್ಕ್ ಲೈಫ್ ಚೇಂಜ್ ಆಗಿ ಅಪರೂಪವಾಗಿದ್ದ ವರ್ಕ್ ಫ್ರಮ್ ಹೋಂ ಕಲ್ಪನೆಯು ಇದೀಗ ಮಾಮೂಲಿ ಎನ್ನುವಂತಾಗಿದೆ.

ಕಳೆದ ಎರಡು ವರ್ಷಕ್ಕೂ ಹೆಚ್ಚು ಸಮಯ ಐಟಿ ಉದ್ಯೋಗಿಗಳ ಕಾರ್ಯಕ್ಷೇತ್ರ ಮನೆಯೇ ಆಗಿಬಿಟ್ಟಿದೆ. ಇತ್ತ ಕೊರೊನಾ ಜನರನ್ನು ಆರ್ಥಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಕುಗ್ಗಿಸಿದೆ. ಈ ಹಿಂದೆ ಕೆಲಸಕ್ಕೆ ಆಫೀಸ್​ಗೆ ಹೋಗ್ತಿದ್ದ ಸಮಯದಲ್ಲಿ ಇದ್ದ ದೈಹಿಕ ಸಾಮರ್ಥ್ಯ ಈಗಂತೂ ಮನೆ ಕೆಲಸವಾದ ಮೇಲೆ ಕುಸಿತಗೊಂಡಿದೆ.


ಪ್ರಮುಖವಾಗಿ, ವರ್ಕ್ ಫರ್ಮ್ ಹೋಂನಿಂದಾಗಿ ಐಟಿ ಮಹಿಳೆಯರಲ್ಲಿ ನಿದ್ರಾಹೀನತೆ, ಮಾನಸಿಕ ಖಿನ್ನತೆ ಸೇರಿದಂತೆ ಇತರೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗ್ತಿದೆ.‌ ಮನೆ ಕೆಲಸ, ಆಫೀಸ್ ಕೆಲಸ ಎಲ್ಲವೂ ಸೇರಿ ಮಹಿಳೆಯರಲ್ಲಿ ನಿಧಾನವಾಗಿ ಇತರೆ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿವೆ. ಹೋಂ ವರ್ಕ್ ಅಂತ್ಯವಾಗದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಿದ್ದಾರೆ ಮನೋ ವೈದ್ಯರು.

ಹೌದು, ತಮಗಿರುವ ಸಮಯದಲ್ಲಿ ಅರ್ಧಭಾಗ ಆಫೀಸ್​ಗೆ ಇನ್ನರ್ಧ ಭಾಗ ಮನೆಗೂ ಹಂಚಿರುವ ದುಡಿಯುವ ಮಹಿಳೆಯರು ಈ ಎರಡರ ನಡುವೆ ತಮ್ಮ ಆರೋಗ್ಯದ ಕಾಳಜಿಯನ್ನೇ ಮರೆತು ಬಿಟ್ಟಿದ್ದಾರೆ.‌ ತಮ್ಮ ಕಚೇರಿ, ಗಂಡನ ನೌಕರಿ, ಮಕ್ಕಳ ಆನ್​ಲೈನ್​ ಪಾಠ, ಮನೆ ಕೆಲಸ ಎಲ್ಲವೂ ಸೇರಿ ವರ್ಕ್ ಲೋಡ್ ಡಬಲ್‌ ಆಗಿದೆ. ಇದರಿಂದ ಮಹಿಳೆಯರಲ್ಲಿ ಮಾನಸಿಕ ಆರೋಗ್ಯದ ಮೇಲೆ ಭಾರಿ ಪ್ರಭಾವವೇ ಬೀರಿದೆ ಅಂತಾರೆ ಅಸ್ಟರ್ ಆರ್. ವಿ ಆಸ್ಪತ್ರೆಯ ಮನೋವೈದ್ಯೆ ಡಾ. ಶ್ರದ್ಧಾ ಶೆಜೆಕರ್.

ವರ್ಕ್ ಫ್ರಮ್ ಹೋಂನಿಂದ ಮಹಿಳೆಯರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಮಹಿಳೆಯರು ಬರ್ನ್ ಔಟ್ ಸಮಸ್ಯೆ ಅಂದರೆ ನಿದ್ರಾ ಸಮಸ್ಯೆ, ಆತಂಕಕ್ಕೆ ಒಳಗಾಗುವುದು, ಖಿನ್ನತೆ ಕಾಡುವುದು, ಜಗಳ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಆಗುವುದನ್ನು ನೋಡುತ್ತಿದ್ದೇವೆ.‌ ಇದಕ್ಕೆ ಉತ್ತಮ ಉಪಾಯವೆಂದರೆ ಕುಟುಂಬದವರಲ್ಲಿ ಸಹಾಯ ಕೇಳುವುದ ೇ ಆಗಿದೆ.

ಮನೆಯವರ ನೆರವು ಅತ್ಯಗತ್ಯ:ಮನೆಯಲ್ಲಿ ಯಾರೇ ಇದ್ದರೂ ಅವರ ಬಳಿ ನಿಮಗಾಗುತ್ತಿರುವ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಮನೆಯವರ ನೆರವು ಪಡೆಯುವುದು ಅಗತ್ಯವಿದೆ. ಎಲ್ಲವನ್ನೂ ಒಬ್ಬರೇ ನಿಭಾಯಿಸುವ ಬದಲು ಮನೆಯ ಇತರ ಸದಸ್ಯರಿಗೂ ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವಂತೆ ಸಲಹೆ ನೀಡ್ತಾರೆ. ಕುಟುಂಬ ಸದಸ್ಯರು ಕೂಡ ಮನೆಯ ಉದ್ಯೋಗಿ ಮಹಿಳೆಯರಿಗೆ ಪ್ರೋತ್ಸಾಹಿಸಿ, ಅವರ ಕೆಲಸವನ್ನು ಹಂಚಿಕೊಳ್ಳಬೇಕು ಎಂದು ಡಾ. ಶ್ರದ್ಧಾ ಶೆಜೆಕರ್ ಮನವಿ ಮಾಡಿದರು.

ಕಚೇರಿಯವರು ಟೈಮಿಂಗ್ಸ್ ಫಿಕ್ಸ್ ಮಾಡಲಿ:ಕಚೇರಿಯವರು ಟೈಮಿಂಗ್ಸ್ ಫಿಕ್ಸ್ ಮಾಡಿ. ಇದರಿಂದ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲದೇ ಇತರೆ ಉದ್ಯೋಗಿಗಳು ರಿಲ್ಯಾಕ್ಸ್ ಮಾಡಲು ಸಹಾಯವಾಗುತ್ತೆ ಅಂತಾರೆ ಅವರು.

ಸದ್ಯ ಕೋವಿಡ್ ಇಳಿಕೆ ಕಂಡಿದೆ. ಸರ್ಕಾರವೂ ಉದ್ಯೋಗಿಗಳು ಕಚೇರಿಗೆ ಮರಳಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಕ್ವಾಲಿಟಿ ವರ್ಕ್​ಗೆ ವರ್ಕ್ ಫ್ರಮ್ ಹೋಂ ಬದಲು ಆಫೀಸ್ ವರ್ಕ್ ಶುರು ಮಾಡಬೇಕಿದೆ. ದೊಡ್ಡ ಪ್ರಮಾಣ ಐಟಿ ಕಂಪೆನಿಗಳು ಈಗಾಗಲೇ ತಮ್ಮ ಉದ್ಯೋಗಿಗಳಿಗೆ ಬುಲಾವ್ ಮಾಡಿವೆ. ಇತರೆ ಕಂಪೆನಿಗಳು ಸಹ ಕಚೇರಿ ತೆರೆದರೆ ಆರ್ಥಿಕ ವೃದ್ದಿಯೊಂದಿಗೆ ದೈಹಿಕ ವೃದ್ಧಿಯೂ ಆಗಲಿದೆ.

ಇದನ್ನೂ ಓದಿ:ವಿದ್ಯಾರ್ಥಿ ನವೀನ್ ಸಾವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಲಕ್ಷ್ಮಣ್ ಸವದಿ

ABOUT THE AUTHOR

...view details