ಬೆಂಗಳೂರು :ಕೋವಿಡ್ ಅಲೆಯ ವ್ಯಾಪಕತೆ ಹಿನ್ನೆಲೆ ಮುಚ್ಚಲಾಗಿದ್ದ ಇಸ್ಕಾನ್ ದೇವಾಲಯದ ಬಾಗಿಲು ನಾಳೆಯಿಂದ ಭಕ್ತರ ದರ್ಶನಕ್ಕಾಗಿ ತೆರೆಯಲಾಗುತ್ತಿದೆ. ಈ ಮೊದಲು ಸಂಪೂರ್ಣ ಸಿದ್ಧತೆಯೊಂದಿಗೆ ಇಸ್ಕಾನ್ ದೇವಸ್ಥಾನ ತೆರೆಯಲಾಗುವುದು ಎಂದು ಆಡಳಿತ ಮಂಡಳಿ ನಿರ್ಧರಿಸಿತ್ತು.
ಇದೇ ನಿಟ್ಟಿನಲ್ಲಿ ಭಕ್ತರಿಗೂ ಹಾಗೂ ದೇವಾಲಯದಲ್ಲಿ ಕೆಲಸ ಮಾಡುವವರಿಗೂ ಅನುಕೂಲವಾಗುವಂತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನ ತೆಗೆದುಕೊಂಡು ಎರಡು ತಿಂಗಳ ಬಳಿಕ ದೇವಸ್ಥಾನದ ಬಾಗಿಲು ತೆರೆಯಲು ನಿರ್ಧರಿಸಿದೆ.
ಇಸ್ಕಾನ್ ದೇವಸ್ಥಾನ ತೆರೆಯುವ ಕುರಿತು ಆಡಳಿತ ಮಂಡಳಿಯಿಂದ ಪ್ರಕಟಣೆ ಸರ್ಕಾರ ಕೊಟ್ಟ ಗೈಡ್‌ಲೈನ್ಸ್ ಪ್ರಕಾರವೇ ದೇವಸ್ಥಾನ ತೆರೆಯಲಿದೆ. ಬೆಳಗ್ಗೆ 8:30 ರಿಂದ 12: 30ರವರೆಗೆ ಹಾಗೂ ಸಂಜೆ 4 ರಿಂದ 8ರವರೆಗೆ ಮಾತ್ರ ತೆರೆದಿರುತ್ತೆ. ಈಗಾಗಲೇ ಸರ್ಕಾರ ಎಸ್ಒಪಿ ನೀಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್, ಟೆಸ್ಟಿಂಗ್, ಮಾಸ್ಕ್ ಧರಿಸುವುದು ಕಡ್ಡಾಯ. ಇಸ್ಕಾನ್‌ಗೆ ಭೇಟಿ ಕೊಟ್ಟವರಿಗೆ ಎಂದಿನಂತೆ ಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗುತ್ತೆ.
ಜೊತೆಗೆ ಇಸ್ಕಾನ್‌ನ ಒಳ ಭಾಗದ ಕಲ್ಯಾಣ ಮಂಟಪ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಾಗುತ್ತೆ. ಆದರೆ, ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಮಾತ್ರ ಅವಕಾಶವಿದೆ. ಕೋವಿಡ್ ಗೈಡ್‌ಲೈನ್ಸ್ ಪ್ರಕಾರ ಮದುವೆಗೆ 100 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತೆ ಎನ್ನಲಾಗಿದೆ.
ಓದಿ:ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿಲ್ಲ: ಕಾವೇರಿ ನೀರಾವರಿ ಅಧೀಕ್ಷಕ ಅಭಿಯಂತರ ಸ್ಪಷ್ಟನೆ