ಕರ್ನಾಟಕ

karnataka

ETV Bharat / state

ಐಎಸ್ಐ ಮಾರ್ಕ್ ಹೆಲ್ಮೆಟ್ ಇಲ್ಲದೇ ಇದ್ದರೂ ಇನ್ಮೇಲೆ ದಂಡ ಪ್ರಯೋಗ..! - Bengaluru 2020

ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರು ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಬೇಕು ಎಂದು ಇಲಾಖೆ ಆದೇಶಿಸಿದೆ.

ಐಎಸ್ಐ ಮಾರ್ಕ್ ಹೆಲ್ಮೆಟ್
ಐಎಸ್ಐ ಮಾರ್ಕ್ ಹೆಲ್ಮೆಟ್

By

Published : Oct 21, 2020, 4:28 PM IST

ಬೆಂಗಳೂರು:ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್​ ಕಡ್ಡಾಯವೆಂದು ಇತ್ತೀಚಿಗೆ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿತು. ಈ ಬೆನ್ನಲ್ಲೇ ಐಎಸ್ಐ ಮಾರ್ಕ್ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದರೂ ದಂಡ ಕಟ್ಟಬೇಕು ಎಂಬ ಆದೇಶ ಇದೀಗ ಹೊರಬಂದಿದೆ.

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕದೇ ರಸ್ತೆಗಿಳಿದರೆ ಡಿಎಲ್ ಅಮಾನತು ಮಾಡಲಾಗುವುದು ಎಂದು ಈ ಹಿಂದೆ ಪೊಲೀಸ್​ ಇಲಾಖೆ ತಿಳಿಸಿತ್ತು. ಹಾಗೆಯೇ ಹಿಂಬದಿ ಸವಾರರು ಹಾಗೂ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿತ್ತು.

ಇದೀಗ, ವಾಹನ ಸವಾರರಿಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ಕೊಟ್ಟಿದೆ. ಐಎಸ್ಐ ಮಾರ್ಕ್ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೂ ದಂಡ ಕಟ್ಟಬೇಕಾಗುತ್ತದೆ. ಅಷ್ಟೇ ಅಲ್ಲದೆ, ಡಿಎಲ್ ಕ್ಯಾನ್ಸಲ್ ಆಗುತ್ತದೆ.‌ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೂ ಬ್ಯೂರೋ ಆಫ್ ಇಂಡಿಯಾನ್ ಸ್ಟಾಂಡರ್ಡ್‌ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ.

ABOUT THE AUTHOR

...view details