ಬೆಂಗಳೂರು:ಗ್ಯಾಸ್ ಸಬ್ಸಿಡಿ ದಿಢೀರ್ ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಮಹಿಳೆಯರು ಹಾಗೂ ಮಧ್ಯಮ ವರ್ಗದವರಿಗೆ ಮೋಸ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗ್ಯಾಸ್ ಸಬ್ಸಿಡಿಯನ್ನ ದಿಢೀರ್ ಆಗಿ ರದ್ದುಗೊಳಿಸಿದೆ. ಮಹಿಳೆಯರ ವೋಟ್ ಪಡೆದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಈಗ ಮಹಿಳೆಯರು ಬಳಸುವ ಗ್ಯಾಸ್ ಸಿಲಿಂಡರ್ನ ಸಬ್ಸಿಡಿಯನ್ನೇ ರದ್ದುಗೊಳಿಸಿದ್ದು ಮಧ್ಯಮ ವರ್ಗದ ಜನರಿಗೆ ಮಾಡಿದ ಮೋಸ ಎಂದಿದ್ದಾರೆ.