ಕರ್ನಾಟಕ

karnataka

ETV Bharat / state

ಕೇಸ್ ಹಾಕಿ ವಿಪಕ್ಷವನ್ನ ಕಟ್ಟಿ ಹಾಕುತ್ತೇವೆ ಅಂದರೆ ಹೆದರಲ್ಲ: ಈಶ್ವರ ಖಂಡ್ರೆ - Ishwar Khandre pressmeet

ಪ್ರಜಾಪ್ರಭುತ್ವದಲ್ಲಿ ಹೋರಾಟದ ಹಕ್ಕು ಎಲ್ಲರಿಗೂ ಇದೆ. ಅದಕ್ಕಾಗಿ ಜನಸಾಮಾನ್ಯರ ಪರ ಹೋರಾಟ ಮಾಡುತ್ತೇವೆ. ನಾವು ಕೇಸ್ ಹಾಕುತ್ತೇವೆ, ವಿರೋಧಪಕ್ಷವನ್ನ ಕಟ್ಟಿಹಾಕುತ್ತೇವೆ ಅಂದರೆ ಹೆದರಲ್ಲ. ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಈಶ್ವರ ಖಂಡ್ರೆ
ಈಶ್ವರ ಖಂಡ್ರೆ

By

Published : Jun 30, 2020, 11:28 PM IST

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಜನರ ಪರ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಸರ್ಕಾರ ಅದನ್ನ ಹತ್ತಿಕ್ಕುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ದಾಖಲು ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನರ ವಿರುದ್ಧ ಸರ್ಕಾರ ಏನು ಮಾಡಿದರೂ ಸರಿಯಲ್ಲ. ಅದರ ವಿರುದ್ಧ ಹೋರಾಟ ಮಾಡುವ ಹಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಹೋರಾಟದ ಹಕ್ಕು ಎಲ್ಲರಿಗೂ ಇದೆ. ಅದಕ್ಕಾಗಿ ಜನಸಾಮಾನ್ಯರ ಪರ ಹೋರಾಟ ಮಾಡುತ್ತೇವೆ. ನಾವು ಕೇಸ್ ಹಾಕುತ್ತೇವೆ, ವಿರೋಧಪಕ್ಷವನ್ನ ಕಟ್ಟಿಹಾಕುತ್ತೇವೆ ಅಂದರೆ ಹೆದರಲ್ಲ. ನಮ್ಮ ಹೋರಾಟ ಮುಂದುವರಿಯುತ್ತೆ ಎಂದರು.

ದೇಶವನ್ನುದ್ದೇಶಿಸಿ ಮೋದಿ ಮಾತನಾಡಿದ್ದಾರೆ. ಕೋವಿಡ್ ನಿಂದ ಜನ ಸಂಕಷ್ಟದಲ್ಲಿದ್ದು, ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗರೀಬ್ ಕಲ್ಯಾಣ ಆರು ತಿಂಗಳಿಗೆ ಮುಂದುವರಿಕೆಗೆ ಪಟ್ಟು ಹಿಡಿದಿದ್ದೆವು. ನಾವು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೆವು. ಅದನ್ನ ಪ್ರಧಾನಿ ಹೇಳಿದ್ದಾರೆ, ಇದಕ್ಕೆ ಸ್ವಾಗತವಿದೆ. ಕಮ್ಮಾರ, ಚಮ್ಮಾರ, ಕುಂಬಾರಿಕೆ ಮಾಡುವ ಜನರಿದ್ದಾರೆ. ಅಂಥವರಿಗೆ ಇವರು ಏನು ಮಾಡಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಒತ್ತಾಯ ಮಾಡಿದ್ದಾರೆ. 10 ಸಾವಿರ ಬಡವರ ಖಾತೆಗೆ ಹಾಕುವಂತೆ ಒತ್ತಾಯಿಸಿದ್ದರು. ಇದನ್ನ ನಾನು ಮರು ಒತ್ತಾಯಿಸುತ್ತೇನೆ. ಕೈಗಾರಿಕೆಗಳು ಮುಂದುವರಿದರೆ ಆರ್ಥಿಕತೆ ಮುಂದುವರಿಯುತ್ತೆ. ಜನರ ಮೂಗಿಗೆ ತುಪ್ಪ ಹಚ್ಚೋಕೆ ಹೊರಟಿದ್ದಾರೆ ಎಂದು ಹೇಳಿದರು.

ABOUT THE AUTHOR

...view details