ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟೀಲ್ ಅವರೇ.. ಕುಟಿಲ ಮಾತುಗಳಿಂದ ಜನರ ದಾರಿ ತಪ್ಪಿಸಬೇಡಿ; ಖಂಡ್ರೆ ಆಕ್ರೋಶ - Ishwar Khandre Outrage Against BJP President Nalin Kumar Kateel
ನಳೀನ್ ಕುಮಾರ್ ಕಟೀಲ್ ಅವರೇ ನಿಮ್ಮ ಕುಟಿಲ ಮಾತುಗಳಿಂದ ಜನರ ದಾರಿ ತಪ್ಪಿಸಬೇಡಿ. ಮೊದಲು ಕೋವಿಡ್ ಸಾಮಗ್ರಿ ಖರೀದಿಯ ಲೆಕ್ಕ ಕೊಡಿ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಳೀನ್ ಕುಮಾರ್ ಕಟೀಲ್ ಅವರೇ ನಿಮ್ಮ ಕುಟಿಲ ಮಾತುಗಳಿಂದ ಜನರ ದಾರಿ ತಪ್ಪಿಸಬೇಡಿ. ಮೊದಲು ಕೋವಿಡ್ ಸಾಮಗ್ರಿ ಖರೀದಿಯ ಲೆಕ್ಕ ಕೊಡಿ. ನನ್ನ ಕ್ಷೇತ್ರದಲ್ಲಿ ಮನೆ ನಿರ್ಮಾಣ "ಅಕ್ರಮ" ಸೃಷ್ಟಿಕರ್ತರು ನೀವು ಎಂದು ನಳಿನ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಸತಿ ರಹಿತ ಬಡ ಜನರ ಹೊಟ್ಟೆ ಮೇಲೆ ಕಲ್ಲು ಹಾಕಿದವರು ನೀವು. ಈ ವಿಚಾರವಾಗಿ ನೇರಾನೇರ ಚರ್ಚೆಗೆ ನಾನು ಸಿದ್ದ. ಅದನ್ನ ಬಿಟ್ಟು ಜನರ ಮುಂದೆ ಸುಳ್ಳಿನ ಪಿಟೀಲು ಬಾರಿಸಬೇಡಿ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಪಕ್ಷ ಹಾಗೂ ಸರ್ಕಾರದ ವಿರುದ್ಧ ನಿರಂತರವಾಗಿ ಟೀಕೆ ನಡೆಸುತ್ತಾ ಬಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಮ್ಮ ಆಕ್ರೋಶವನ್ನು ಇಂದು ಬಿಜೆಪಿ ಪಕ್ಷದ ಅಧ್ಯಕ್ಷರ ವಿರುದ್ಧ ವ್ಯಕ್ತಪಡಿಸಿದ್ದಾರೆ.
TAGGED:
khandre tweet