ಕರ್ನಾಟಕ

karnataka

ETV Bharat / state

ಕೈಗಾರಿಕಾ ಕ್ಷೇತ್ರದ ಮುಖಂಡರ ಜೊತೆ ಜೂಮ್ ಆ್ಯಪ್ ಮೂಲಕ ಈಶ್ವರ್ ಖಂಡ್ರೆ ಸಭೆ - Bangalore

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದು ಕೈಗಾರಿಕಾ ಕ್ಷೇತ್ರದ ಮುಖಂಡರ ಜೊತೆ ಜೂಮ್ ಆ್ಯಪ್ ಮೂಲಕ ಸಭೆ ನಡೆಸಿದರು.

Ishwar Khandre
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

By

Published : Aug 9, 2020, 7:49 PM IST

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದು ಕೈಗಾರಿಕಾ ಕ್ಷೇತ್ರದ ಮುಖಂಡರ ಜೊತೆ ಜೂಮ್ ಆ್ಯಪ್ ಮೂಲಕ ಸಂವಾದ ನಡೆಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ, ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ಘಟಕದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಅವರು, ಇಂಗ್ಲೆಂಡ್, ಆಸ್ಟ್ರೇಲಿಯಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ನೂರಾರು ವೀರಶೈವ ಲಿಂಗಾಯತ ಸಮುದಾಯದ ವ್ಯಾಪಾರಸ್ಥರ ಜತೆ ಸಮಾಲೋಚಿಸಿದರು. ಸಮಾಜದ ಮುಖಂಡರು ಹಾಗೂ ರಾಜ್ಯದ ಸಣ್ಣ ಮತ್ತು ದೊಡ್ಡ ಕೈಗಾರಿಕೋದ್ಯಮ ಸಮಸ್ಯೆಗಳ ಕುರಿತಾಗಿ ಅವರು ಚರ್ಚೆ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಕಲ್ಯಾಣ ಕರ್ನಾಟಕದ ಉದ್ಯಮಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ಕೊರೊನಾದಿಂದಾಗಿ ಎಲ್ಲಾ ಸಮುದಾಯ, ವರ್ಗದ ಹಾಗೂ ಪ್ರದೇಶದ ಜನರಿಗೆ ಸಮಸ್ಯೆ ಆಗಿದೆ. ಸರ್ಕಾರಗಳ ಸಹಕಾರವನ್ನೂ ಮೀರಿದ ಸಮಸ್ಯೆ ಇದು. ಅವರಿಂದ ಸಂಪೂರ್ಣ ಸಹಾಯ ನಿರೀಕ್ಷಿಸುವುದು ಸರಿಯಲ್ಲ. ದೊಡ್ಡ ಉದ್ಯಮಿಗಳು ನಿರುದ್ಯೋಗಿ ಯುವಕರಿಗೆ ಕೆಲಸ ನೀಡಲು ಮುಂದಾಗಬೇಕು. ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಮುಂದಾಗಬೇಕು. ಬೇರೆ ದೇಶದಲ್ಲಿ ಉದ್ಯಮ ನಡೆಸುತ್ತಿರುವವರು ಇಲ್ಲಿನವರೆಗೆ ಸಹಾಯ, ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ವೀರಶೈವ ಮಹಾಸಭಾದಿಂದ ಪ್ರಯತ್ನ ಮಾಡುತ್ತೇವೆ. ಉಳಿದವರೂ ತಮ್ಮ ಸಹಕಾರ ನೀಡಬೇಕು. ಉದ್ಯಮಿಗಳು, ಶ್ರೀಮಂತ ವರ್ಗದವರು ಸಹಾಯ ಹಸ್ತ ಚಾಚಬೇಕೆಂದು ಕರೆ ಕೊಟ್ಟರು.

ಸೇಡಂ ಶಾಸಕ ರಾಜಕುಮಾರ ಪಾಟೀಲ್ ಮಾತನಾಡಿ, ಸರ್ಕಾರದಿಂದ ಸಮುದಾಯದ ಉದ್ಯಮಿಗಳಿಗೆ ಸಹಕಾರ ನೀಡುವ ಭರವಸೆ ಇದೆ ಎಂದು ವಿವರಿಸಿದರು. ಒಟ್ಟಾರೆ ಒಂದಿಷ್ಟು ಆಶಾ ಭಾವನೆಯನ್ನು ಮೂಡಿಸುವ ನಿಟ್ಟಿನಲ್ಲಿ ಇಂದಿನ ಸಭೆ ಸಫಲವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಫಲ ತಿಳಿದು ಬರಲಿದೆ ಎಂದರು

ABOUT THE AUTHOR

...view details