ಬೆಂಗಳೂರು: ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ್ಕಿ ಮೂಲದ ವಿದ್ಯಾರ್ಥಿಯ ನಿಧನಕ್ಕೆ ಈಶ್ವರ್ ಖಂಡ್ರೆ ಹಾಗೂ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ನಿಧನಕ್ಕೆ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ.
ಮಾಜಿ ಶಾಸಕ ಅಪ್ಪಾಜಿಗೌಡ, ಉಕ್ರೇನ್ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನಿಧನ: ಕೈ ನಾಯಕರ ಸಂತಾಪ - Dinesh Gundurao tweet
ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲ್ಕಿ ಮೂಲದ ವಿದ್ಯಾರ್ಥಿಯ ನಿಧನಕ್ಕೆ ಈಶ್ವರ್ ಖಂಡ್ರೆ ಹಾಗೂ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ನಿಧನಕ್ಕೆ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ.
![ಮಾಜಿ ಶಾಸಕ ಅಪ್ಪಾಜಿಗೌಡ, ಉಕ್ರೇನ್ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನಿಧನ: ಕೈ ನಾಯಕರ ಸಂತಾಪ Ishwar Khandre condoles the death of MBBS student](https://etvbharatimages.akamaized.net/etvbharat/prod-images/768-512-8667860-392-8667860-1599141994595.jpg)
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟ್ವೀಟ್ ಮಾಡಿ, ಉಕ್ರೇನ್ನಲ್ಲಿ ಎಂಬಿಬಿಎಸ್ ಪದವಿ ಓದುತ್ತಿದ್ದ ಭಾಲ್ಕಿ ತಾಲೂಕಿನ ಕಾದಲಾಬಾದ ಗ್ರಾಮದ ಶಾಲಿವಾನ ಬಿರಾದಾರ ಅವರ ಏಕೈಕ ಪುತ್ರ ಅಮರ ಬಿರಾದಾರ ಉಕ್ರೇನ್ ದೇಶದಲ್ಲಿ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಆತನ ಕುಟುಂಬದವರ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದು, ಕುಟುಂಬಸ್ಥರಲ್ಲಿ ದುಃಖ ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅಮರನ ಮೃತದೇಹ ತಾಯ್ನಾಡಿಗೆ ತರಲು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದು, ಮೃತದೇಹ ತರುವ ಪ್ರಯತ್ನ ಮುಂದುವರಿದಿದೆ ಎಂದಿದ್ದಾರೆ.
ಅಪ್ಪಾಜಿ ಗೌಡ ನಿಧನಕ್ಕೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿಗೌಡ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂಬ ಸಂಗತಿ ನನ್ನನ್ನು ಆಘಾತಕ್ಕೆ ದೂಡಿದೆ. ಅವರು ಭದ್ರಾವತಿ ಕ್ಷೇತ್ರಕ್ಕೆ ಬಹಳಷ್ಟು ಸೇವೆಯನ್ನ ಸಲ್ಲಿಸಿದ್ದರು. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಒದಗಿಸಲಿ ಎಂದು ಟ್ಟೀಟ್ ಮಾಡಿದ್ದಾರೆ.