ಬೆಂಗಳೂರು:ಡ್ಯಾಂಗಳಿಂದ ನೀರು ಉಳಿಸುವುದಿಲ್ಲ. ಮಣ್ಣಿಂದ ಮಾತ್ರ ನೀರು ಉಳಿತಾಯ ಮಾಡಲು ಸಾಧ್ಯ ಎಂದು ಈಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು.
ಈಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ್ ಸುದ್ದಿಗೋಷ್ಠಿ ಕಾವೇರಿ ಕೂಗು ಯೋಜನೆಯ ಚಟುವಟಿಕೆಗಳು, 2021 ಕಾರ್ಯಕ್ರಮಗಳ ಬಗ್ಗೆ ಈಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ ಪುಟ್ಟ ಡ್ಯಾಂಗಳಿಂದ ರೈತರಿಗೆ ಅನುಕೂಲವಾಗುತ್ತದೆ. ಆದರೆ ದೊಡ್ಡ ಡ್ಯಾಂಗಳಿಂದ ಪ್ರಯೋಜನಗಳಿಲ್ಲ. ಫಲವತ್ತವಾದ ಮಣ್ಣಿಂದ ಮಾತ್ರ ನೀರು ಇಂಗಿಸಿ ಉಳಿತಾಯ ಮಾಡಲು ಸಾಧ್ಯ ಎಂದರು.
ಮೇಕೆದಾಟು ವಿವಾದ:
ಮೇಕೆದಾಟು ಯೋಜನೆ ವಿವಾದದ ಬಗ್ಗೆ ಮಾತನಾಡಿ, ಕಾವೇರಿ ತಾಯಿಗೆ ಯಾವ ರಾಜ್ಯ ಎಂಬುದು ಗೊತ್ತಿಲ್ಲ. ನೀರಿನ ವಿವಾದಗಳು ಹೆಚ್ಚಾದಂತೆ ಕಾವೇರಿ ನದಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಎಷ್ಟು ನೀರು ಯಾರಿಗೆ ಸಿಗಬೇಕು ಎಂಬ ವಿವಾದಕ್ಕೂ ಮೊದಲು ನದಿ ನೀರಿನ ರಕ್ಷಣೆ ಹೇಗೆ ಸಾಧ್ಯ ಎಂದು ಚಿಂತಿಸಬೇಕಿದೆ ಎಂದರು.
ಇನ್ನು ಕಾವೇರಿ ಕೂಗು ಯೋಜನೆಯಡಿ ಬಲವಂತವಾಗಿ ಹಣ ಒಟ್ಟು ಮಾಡುತ್ತಿರುವ ಕೋರ್ಟ್ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿ, ರೈತರಿಂದ ಒತ್ತಾಯಪೂರ್ವಕವಾಗಿ ಹಣ ವಸೂಲಿ ಮಾಡಲು ಸಾಧ್ಯ ಎಂದರು.
ಇನ್ನು ಸರ್ಕಾರಿ ಜಾಗದಲ್ಲಿ ಮರ ನೆಡುತ್ತಿದ್ದಾರೆ ಎಂಬ ವಿವಾದಕ್ಕೆ ಉತ್ತರಿಸಿ, ಸರ್ಕಾರಿ ಜಾಗದಲ್ಲಿ ಗಿಡ ನೆಟ್ಟು ಬೆಳೆಸಲು ಸಾಧ್ಯವೇ. ಅದರ ನಿರ್ವಹಣೆಯೂ ಆಗೋದಿಲ್ಲ. ಹೀಗಾಗಿ ರೈತರ ಜಮೀನಿನಲ್ಲಿ ಬೆಳೆಸಿ ಇದರ ಇಳುವರಿ ನೋಡಬೇಕಿದೆ ಎಂದರು.
ಈ ಯೋಜನೆಯನ್ನು 12 ವರ್ಷ ಮಾಡುವ ಉದ್ದೇಶ:
ಕಾವೇರಿ ಕೂಗು ಅಭಿಯಾನದ ಬಗ್ಗೆ ರೈತರಿಗೆ ಉತ್ಸಾಹ ಇದೆ. ಸರ್ಕಾರವೂ ಸಪೋರ್ಟ್ ಮಾಡಿದೆ. ಸ್ವಯಂ ಸೇವಕರು ಕೆಲಸ ಮಾಡಿ 1 ಕೋಟಿ 10 ಲಕ್ಷ ಸಸಿ ನಡೆಲಾಗಿದೆ. ಈ ವರ್ಷ ಮೂರುವರೆ ಕೋಟಿಗೆ ಹೆಚ್ಚಿಸಬೇಕು. ಈವರೆಗೆ ಪರಿಸರದ ಕೆಲಸಗಳನ್ನು ಸ್ವಲ್ಪ ಜನರಷ್ಟೆ ಮಾಡುತ್ತಿದ್ದರು. ಆದರೆ, ಇದೆ ಮೊದಲ ಬಾರಿ ರೈತರ ಭಾಗವಹಿಸುವಿಕೆಯಿಂದ ಆಗುತ್ತಿದೆ. ಶೇ. ಶೇ 80ರಷ್ಟು ಭೂಮಿ ರೈತರ ಕೈಯಲ್ಲಿದೆ. ರೈತರನ್ನು ತೊಡಗಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.
ಈಗಾಗಲೇ 890 ಸ್ವಯಂ ಸೇವಕರು, ಕೆಲಸಗಾರರು ಪಂಚಾಯಿತಿಗಳಲ್ಲಿದ್ದಾರೆ. ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯನ್ನು 8 ರಿಂದ 12 ವರ್ಷ ಮಾಡುವ ಉದ್ದೇಶ ಇದೆ ಎಂದರು.
ವ್ಯವಸಾಯಕ್ಕೆ ಮಣ್ಣಿನ ಫಲವತ್ತತೆ ಅಗತ್ಯ:
ಮಣ್ಣಿನಲ್ಲಿ ಶಕ್ತಿ ಇಲ್ಲದಿದ್ದರೆ ವ್ಯವಸಾಯ ಮಾಡಲು ಸಾಧ್ಯವಿಲ್ಲ. 2030 ಕ್ಕೆ ಆಹಾರ ಅಭದ್ರತೆ ಉಂಟಾಗದಿರಲು ಮಣ್ಣಿಗೆ ಬೇಕಾದ ಸಾವಯವ ಗುಣ ಕೊಡಬೇಕು. ಮಣ್ಣಿನ ಫಲವತ್ತತೆ ಕಾಪಾಡಬೇಕು. ಸದ್ಯದ ಸ್ಥಿತಿಯಲ್ಲಿ 60 ವರ್ಷ ಮಾತ್ರ ವ್ಯವಸಾಯ ಮಾಡಬಹುದು ಎಂದು ಯುಎಸ್ಎ ಅಧ್ಯಯನ ತಿಳಿಸಿದೆ. ಇದು ದೇಶದಲ್ಲಿ ಆಗಬಾರದೆಂದರೆ ಮಣ್ಣಿನ ಫಲವತ್ತತೆ ಕಾಪಾಡಬೇಕು. ಇದಕ್ಕಾಗಿ ಮರಗಳ ಎಲೆಗಳಿಂದ, ಪ್ರಾಣಿಗಳ ಸೆಗಣಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕಿದೆ ಎಂದರು.
ಓದಿ: ಬೆಂಗಳೂರು ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು ಆರೋಪ: ಠಾಣೆ ಮುಂದೆ ಹೈಡ್ರಾಮಾ, ಖಾಕಿಯಿಂದ ಲಾಠಿ ಚಾರ್ಜ್
ಮಣ್ಣಿನ ಫಲವತ್ತತೆ ಹೆಚ್ಚಿಸಲು ಅರಣ್ಯ ಕೃಷಿಗೆ ಉತ್ತೇಜನ ನೀಡಲು ಕಾವೇರಿ ನದಿ ಪಾತ್ರದಲ್ಲಿ ಸತತ 8 ರಿಂದ 12 ವರ್ಷ ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಿದೆ.