ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ಬೆನ್ನತ್ತಿರುವ ಐಎಸ್ಡಿ ಇಂದು ಕೂಡ ತನಿಖೆ ಮುಂದುವರೆಸಲಿದ್ದು, ಮಾಜಿ ಸಂಸದ ಶಿವರಾಮೇಗೌಡ ಪುತ್ರ ಚೇತನ್ ಗೌಡನಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಮಾಜಿ ಸಂಸದ ಶಿವರಾಮೇಗೌಡ ಪುತ್ರನಿಗೆ ಐಎಸ್ಡಿ ನೋಟಿಸ್ - ಚೇತನ್ ಗೌಡ
ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಶಿವರಾಮೇಗೌಡ ಪುತ್ರ ಚೇತನ್ ಗೌಡನಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಐಎಸ್ಡಿಯಿಂದ ನೋಟಿಸ್ ನೀಡಲಾಗಿದೆ.
ಮಾಜಿ ಸಂಸದ ಶಿವರಾಮೇಗೌಡರ ಪುತ್ರನಿಗೆ ಐಎಸ್ಡಿ ನೋಟಿಸ್
ಶಾಂತಿನಗರ ಐಎಸ್ಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸುವಂತೆ ಐಎಸ್ಡಿ ನೋಟಿಸ್ ನೀಡಿದ್ದು, ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಅರೋಪ ಪ್ರಕರಣ ಸಂಬಂಧ ವಿಚಾರಣೆ ನಡೆಸಲಿದ್ದಾರೆ.
ಈಗಾಗಲೇ ಕೇರಳ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಐಎಸ್ಡಿ ಬಂಧಿಸಿದ್ದು, ಇವರ ಹೇಳಿಕೆ ಆಧಾರದ ಮೇರೆಗೆ ಹಾಗೂ ಆರೋಪಿಗಳ ಮೊಬೈಲ್ನಲ್ಲಿರುವ ಮಾಹಿತಿ ಮೇರೆಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.